ರೋಣ :- ಮಹಿಳೆಯರ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಬದುಕಿಗೆ ನರೇಗಾ ಆಸರೆ ಆಗಿದೆ ಹಾಗಾಗಿ ನಿಮ್ಮ ಗ್ರಾಮ ಪಂಚಾಯತಿ ಗೆ ನಮೊನೆ – 6 ಅನ್ನು ಸಲ್ಲಿಸುವ ಮೂಲಕ ಕೆಲಸವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಡರಾಗಿ ಸ್ವಾವಲಂಬನೆಯ ಬದುಕನ್ನು ಸಾಗಿಸಿ ಅಂತಾ ಜಿಲ್ಲಾ ಪಂಚಾಯತ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿರಣಕುಮಾರ ಎಸ್.ಎಚ್ ಅಭಿಮತ ವ್ಯಕ್ತಪಡಿಸಿದರು..
ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ನಡೆದ ಮಹಿಳಾ ಸ್ನೇಹಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು..
ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ಒದಗಿಸುವ ಮೂಲಕ ಗ್ರಾಮೀಣ ಜನರ ಆರ್ಥಿಕ ಜೀವನ ವನ್ನು ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯು ಜೀವನೋಪಾಯದ ಭದ್ರತೆ ನೀಡುತ್ತದೆ. ಕೌಶಲ್ಯ ರಹಿತ ಕೆಲಸ ಮಾಡಲು ಮಹಿಳೆಯರು ಸ್ವಯಂ ಪ್ರೇರಣೆ ಯಿಂದ ಮುಂದೆ ಬರಬೇಕು, ಅಳತೆ ಪ್ರಕಾರ ಕೆಲಸ ಮಾಡಿದರೆ ಪ್ರತಿ ದಿನ 316 ರೂ. ಪಾವತಿಸಲಾಗುತ್ತದೆ. ಪ್ರತಿ ಎನ್ಎಂಆರ್‌ನಲ್ಲಿ ಕಡ್ಡಾಯವಾಗಿ ಶೇ. 60ರಷ್ಟು ಮಹಿಳೆಯರು ಇರುವಂತೆ ಬಿಎಫ್‌ಟಿ, ಡಿಇಒ, ಜಿಕೆಎಮ್, ಕ್ರಮ ವಹಿಸಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚು ಮಾಡಲು ಸೂಚಿಸಿದರು..
ನರೇಗಾ ಯೋಜನೆಯ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ, ಇದರ ಲಾಭ ಪಡೆದು ಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ನರೇಗಾ ತಂಡದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಮಹಿಳೆಯರು ಖಾಸಗಿ ಕಾಮಗಾರಿ ಸೇರಿದಂತೆ ಇತರೆಡೆ ಮಹಿಳೆಯರು ದುಡಿದರೆ ನೀಡುವ ವೇತನದಲ್ಲಿ ತಾರತಮ್ಯವಿದೆ. ಪುರುಷರಿಗೆ ಕೊಡುವಷ್ಟು ಕೂಲಿ ಹಣವನ್ನು ಮಹಿಳಾ ಕಾರ್ಮಿಕರಿಗೆ ನೀಡುವುದಿಲ್ಲಾ. ಆದರೆ, ನರೇಗಾದಡಿ ಸಮಾನ ಕೂಲಿ ನಿಯಮವಿದೆ. ಹೀಗಿದ್ದರೂ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ. ಇದನ್ನು ಮನಗಂಡ ಜಿಲ್ಲಾ, ತಾಲೂಕು ಪಂಚಾಯತಿ ವತಿಯಿಂದ ಮುಂಬರುವ ಎಲ್ಲ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಜಾಗೃತಿ ಮೂಡಿಸುವುದು ಹಾಗೂ ಕಡ್ಡಾಯವಾಗಿ ಮಹಿಳೆಯರ ಹೆಸರಿನಲ್ಲಿ ಎನ್ಎಂಆರ್ ಸೃಜಿಸುವಂತೆ ಮಾನ್ಯ ಸಿಇಓ ಅವರು ಸೂಚಿಸಿದ್ದಾರೆ. ಎನ್‌ಆರ್‌ಎಲ್‌ಎಂ, ತೋಟಗಾರಿಕೆ ಇಲಾಖೆ, ನರೇಗಾ ಯೋಜನೆ ಸಹಯೋಗದಲ್ಲಿ ಪೌಷ್ಟಿಕ ತೋಟ ಕಾಮಗಾರಿಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕವಲೂರ ಮಾತನಾಡಿ ಮುಂದಿನ ವಾರದಲ್ಲೇ ಮಹಿಳೆಯರಿಗಾಗಿ ಸಮುದಾಯ ಕಾಮಗಾರಿ ಆರಂಭ ಮಾಡುತ್ತೇವೆ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ನಮ್ಮ ಗ್ರಾಮ ಪಂಚಾಯತಿಯಿಂದ ಶೇ 60% ಪ್ರತಿಶತ ಮಾಡುವದು ನಮ್ಮ ಗುರಿ, ನಮ್ಮ ಪಂಚಾಯತಿ ಅತಿ ಕಡಿಮೆ ಮಹಿಳಾ ಪಾಲ್ಗೊಳ್ಳುವಿಕೆಯಿದೆ, ಇದನ್ನು ಹೆಚ್ಚಿಸುವುದರಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಶಿಲ್ಪಾ ಕವಲೂರ, ಐಇಸಿ ಮಂಜುನಾಥ, ತಾಂತ್ರಿಕ ಸಹಾಯಕ ಅಜಯ ಅಬ್ಬಿಗೇರಿ, ಎನ್.ಆರ್.ಎಲ್.ಎಂ ತಾಲೂಕ ವ್ಯವಸ್ಥಾಪಕ ಗುರುಬಸಪ್ಪ ವೀರಾಪೂರ, ಜಿಕೆಎಂ ಯಶೋದಾ ಅಮರಗೋಳ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು..