This is the title of the web page
This is the title of the web page

Please assign a menu to the primary menu location under menu

Local News

ಪ್ರವಾಹ ಮುನ್ನಚ್ಚರಿಕೆ ವಹಿಸುವುದು ಅವಶ್ಯಕ:ಅಣ್ಣಾಸಾಹೆಬ್ ಜೊಲ್ಲೆ


ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಿಗೆ ಪ್ರವಾಹ ಎದುರಾದರೇ ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಸುರಕ್ಷಿತ ಸ್ಥಳಗಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಬೇಕು. ಸರಿಯಾಗಿ ಊಟದ ವ್ಯವಸ್ಥೆ. ಶುದ್ಧ ಕುಡಿಯುವ ನೀರು ಸಿಗುವ ಹಾಗೇ ನೋಡಿಕೊಳ್ಳಬೇಕು.

ಪ್ರತಿಯೊಂದು ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಂವಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಇಲ್ಲಿನ ಲೋಕೋಪಯೋಗಿ ಸಭಾ ಭವನದಲ್ಲಿ ನಡೆದ ಪ್ರವಾಹ ಮುನ್ನೇಚ್ಚರಿಕೆ ಕುರಿತು ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷತೆಯಲ್ಲಿ ಚಿಕ್ಕೋಡಿ. ಅಥಣಿ. ರಾಯಬಾಗ.ಕಾಗವಾಡ.ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೋಯ್ನಾ ಮತ್ತು ಇತರೇ ಜಲಾಶಯ ಮೇಲೆ ನಿಗಾ ಇಡಬೇಕು. ಕಳೆದ ಪ್ರವಾಹದಲ್ಲಿ ಮಾಡಿರುವ ತಪ್ಪುಗಳು ಈಗ ಆಗಬಾರದು. ಎಲ್ಲ ಇಲಾಖೆಗಳು ಜಂಟಿಯಾಗಿ ಕೆಲಸ ಕಾರ್ಯ ನಿರ್ವಹಿಸಬೇಕು.
ಒಬ್ಬರ ಮೇಲೆ ಹಾಕಿ ಜಾರಿಕೊಳ್ಳುವ ಮನೋಭಾವ ತೆಗೆದುಹಾಕಬೇಕು.

ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಉಂಟಾಗುವ ಮುನಸ್ಸೂಚನೆ ಇಲ್ಲ. ಆದರೂ ಮುಂದಿನ ವಾರದಲ್ಲಿ ಮಳೆಬಪ್ರಮಾಣ ಹೆಚ್ಚಾದರೇ ನದಿಗಳಿಗೆ ನೀರು ಬರುವ ಸಾಧ್ಯತೆ ಇರುತ್ತದೆ ಎಂದರು.

ಅತಿವೃಷ್ಠಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಸಿಗುವ ಹಾಗೇ ನೋಡಿಕೊಳ್ಳಬೇಕು. ಯಾರೋದೋ ಒತಗತಡಕ್ಕೆ ಮಣಿದು ಮನೆ ಇದ್ದವರಿಗೆ ಮನೆ ಕೊಡುವ ವ್ಯವಸ್ಥೆ ನಿಲ್ಲಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ. ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ. ಚಿಕ್ಕೋಡಿ ಡಿ ಎಸ್ ಪಿ ಪಿ ಬಸವರಾಜ ಯಾಲಿಗಾರ, ಗೋಕಾಕ ಡಿ ಎಸ ಪಿ ಮನೋಜಕುಮಾರ ನಾಯಿಕ, ಅಥಣಿ ಡಿ ಎಸ ಪಿ ಗಿರೀಶ, ತಹಶಿಲ್ದಾರ ಸಿ.ಎಸ್.ಕುಲಕರ್ಣಿ, ಮುಂತಾದವರು ಉಪಸ್ಥಿತರಿದ್ದರು


Gadi Kannadiga

Leave a Reply