ಅವೈಜ್ಞಾನಿಕ ನಿರ್ಮಾಣದ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮುಂದೂಡಬೇಕೆಂದು ಒತ್ತಾಯ
ಕುಷ್ಟಗಿ:-ಕುಷ್ಟಗಿ ನೂತನ ನಿಲ್ದಾಣ ವನ್ನು ಮೂಲಭೂತ ಸೌಕರ್ಯಗಳು ಸೇರಿ ವಂಚಿತವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ್ ಒತ್ತಾಯಿಸಿದ್ದಾರೆ.
ಇಂದು ಕುಷ್ಟಗಿ ಪ್ರವಾಸಿಮಂದಿರಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತರಾತುರಿಯಲ್ಲಿ ಬಸ್ ನಿಲ್ದಾಣ ದ ಉದ್ಘಾಟನೆ ಗೆ ಮುಂದಾಗಿರುವುದರ ಬಗ್ಗೆ ನಮಗೆ ಮಾಹಿತಿ ಇದೆ.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 4 ಕೋಟಿ ಅನುದಾನದಲ್ಲಿ ಕಾಮಗಾರಿಯು ಸರಿಯಾದ ರೀತಿಯಲ್ಲಿ ಮಾಡಿಲ್ಲಾ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ .ಸಾರ್ವಜನಿಕರ ಅನುಕೂಲವಾಗುವಂತೆ ಬಸ್ ನಿಲ್ದಾಣ ಮಾಡಿಲ್ಲಾ ಮಳೆ ಹಾಗೂ ಬಿಸಿಲಿನಿಂದಲೂ ಸಹ ಸಾರ್ವಜನಿಕ ರಿಗೆ ತೊಂದರೆ ಆಗುವ ರೀತಿ ಬಸ್ ನಿಲ್ದಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿದಿಗಳು ಆಸಕ್ತಿ ವಹಿಸಬೇಕು ಎಂದರು. ಚುನಾವಣೆ ಹತ್ತಿರವಿರುವ ನಮ್ಮ ಅಧಿಕಾರಾವಧಿಯಲ್ಲಿ ಕಾಮಗಾರಿಯಾಗಿದೆ ಎನ್ನುವ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.