ಗದಗ) ಮಾರ್ಚ 30 : ನರೇಗಾ ಯೋಜನೆಯು ಬೇಸಿಗೆ ದಿನಗಳಲ್ಲಿ ಬಡವರಿಗೆ ಅನ್ನ ಹಾಕುವುದಲ್ಲದೇ, ಬಿತ್ತನೆಗೆ ಸಹಾಯ ಮಾಡುತ್ತದೆ. ನೀವು ಶೃದ್ದೆಯಿಂದ ಕೆಲಸ ಮಾಡಿದರೆ ಅದು ದೇವರ ಕೆಲಸ ಮಾಡಿದ ಹಾಗೆ ಆಗುತ್ತೆ ಅಂತಾ ಹುಲ್ಲೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರಣ್ಣ ಪತ್ತಾರ ಕಾಯಕ ಬಂಧುಗಳಿಗೆ ಸಲಹೆ ನೀಡುವುದರ ಜೊತೆಗೆ ಕಿವಿಮಾತು ಹೇಳಿದರು.
ರೋಣ ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯತಿ ಯಲ್ಲಿ ಕಾಯಕ ಬಂಧುಗಳ ಸಭೆ ಹಾಗೂ ತರಬೇತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಬೇಸಿಗೆ ದಿನಗಳಲ್ಲಿ ನಮ್ಮ ಭಾಗದಲ್ಲಿ ಕೆಲಸ ಕಡಿಮೆ ಇರುತ್ತದೆ ಆ ಸಂದರ್ಭದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಏಪ್ರಿಲ್ 1 ರಿಂದ ಹುಲ್ಲೂರ ಗ್ರಾಮ ಪಂಚಾಯತಿಯಲ್ಲಿ ಕೆಲಸ ಪ್ರಾರಂಭ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿಯ ಸಮುದಾಯ ಕೆಲಸ ಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಎನ್ಎಂಎಂಎಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿ ಕಾಯಕ ಬಂಧುಗಳು ಎನ್ಎಂಎಂಎಸ್ ಆ್ಯಪ್‌ನ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗುದಂತೆ ನೋಡಿಕೊಳ್ಳಬೇಕು. ಈ ಬಾರಿ ನರೇಗಾ ಕೂಲಿ ಮೊತ್ತ ₹ 309 ರಿಂದ ₹316ಕ್ಕೆ ಹೆಚ್ಚಳವಾಗಿದೆ ಹಾಗಾಗಿ ಜನರಿಗೆ ತಿಳಿವಳಿಕೆ ನೀಡುವುದು ಅವರನ್ನು ಹೆಚ್ಚು ಹೆಚ್ಚು ಕೆಲಸಕ್ಕೆ ಬರುವ ಹಾಗೆ ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಹೊಸ ಜಾಬ್‌ಕಾರ್ಡ್, ಜಾಬ್‌ಕಾರ್ಡ್ ಪ್ರತ್ಯೇಕಿಸುವಿಕೆ, ನಮೂನೆ -6 ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕರಾದ ಬಿ. ಕೆ. ಕರಾಕನಗೌಡ್ರ, BFT ಅಶೋಕ. ಜಿ. ಕಂಬಳಿ ಹಾಗೂ ಗಣಕ ಯಂತ್ರ ನಿರ್ವಾಹಕರು ಹಾಗೂ ಬಿಲ್ ಕಲೆಕ್ಟರ್ ಹಾಗೂ ಹುಲ್ಲೂರು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
Tags:STATE