This is the title of the web page
This is the title of the web page

Please assign a menu to the primary menu location under menu

State

ಯೋಗ, ದ್ಯಾನ & ಆದ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು – ಜೆ. ಎಮ್.ಕಾಲಿಮಿರ್ಚಿ


ಬೆಳಗಾವಿ: ಯೋಗ, ದ್ಯಾನ & ಆದ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು ಎಂದು ಶರಣ ಜೆ. ಎಮ್.ಕಾಲಿಮಿರ್ಚಿ ( C.P.I ಮಾಳಮಾರುತಿ ) ಹೇಳಿದರು .

ಅವರು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ & ಉಪನ್ಯಾಸ ಸಂದರ್ಭದಲ್ಲಿ ” ನಿತ್ಯಯೋಗ ” ಕುರಿತಾಗಿ ತಮ್ಮ ಅನುಭಾವ ಹಂಚಿಕೊಂಡರು .

ಆಧುನಿಕ ಜೀವನ ಶೈಲಿಯು ಮನುಷ್ಯನನ್ನು ಅಶಾಂತಿಯ ಕಡೆಗೆ, ಜೊತೆಗೆ ಅನಾರೋಗ್ಯದ ಕಡೆಗೆ ಕರೆದೊಯ್ಯುತ್ತಿದೆ. ಮನುಷ್ಯ ಹುಟ್ಟುತ್ತಾ ವಿಶ್ವಮಾನವ ಹೌದು. ಆದರೆ ಬೆಳೆಯುತ್ತ – ಬೆಳೆಯುತ್ತ ಕುಟುಂಬ, ಸಮಾಜ, ಧರ್ಮ, ಸಂಪ್ರದಾಯಗಳ ಬಂದನಕ್ಕೊಳಪಟ್ಟು ಕುಬ್ಜನಾಗುತ್ತಾನೆ. ದೈಹಿಕ ಬೆಳವಣಿಗೆ & ಮಾನಸಿಕ ಸ್ಥಿರತೆಗೆ ಭಾರತೀಯ ಯೋಗ & ದ್ಯಾನ ಸಂಸ್ಕೃತಿಯು ಒಳ್ಳೆಯ ಸಾದನಗಳಾಗುವ ಜೊತೆಗೆ ನಮ್ಮ ಬದುಕನ್ನು ಸರಳ & ಆದರ್ಶಮಯವಾಗಿಸುವ ಕಾರ್ಯ ಮಾಡುವದರಲ್ಲಿ ಸಂಶಯವಿಲ್ಲ..ಅದಕ್ಕೆ ನಮ್ಮ ಶರಣರ ಜೀವನ & ವಚನಗಳು ಮಾನವ ಬದುಕಿನ ವಾಸ್ತವತೆಯನ್ನು ಪ್ರತಿಭಿಂಭಿಸಿ , ಬದುಕಲು ಬೇಕಾದ ಮಾನವೀಯ ಮೌಲ್ಯಗಳನ್ನು ತಿಳಿ‌ಸಿ ಕೊಡುವ ಸಾಧನಗಳಾಗಿವೆ ಎಂದು C.P.I ಕಾಲಿಮಿರ್ಚಿ ನುಡಿದರು.

ಹಲವಾರು ನಿತ್ಯ ಬದುಕಿನ ಸನ್ನಿವೇಶಗಳ ಉದಾಹರಣೆಯೊಂದಿಗೆ ವಿಶ್ಲೇಷಿಸುತ್ತಾ ಎಲ್ಲರ ಮನಮುಟ್ಟುವಂತೆ ಉಪನ್ಯಾಸ ಮಾಡಿದರು.. ಸಂಘಟನೆಯ ಅಧ್ಯಕ್ಷರಾದ ಶ್ರೀ ಈರಣ್ಣ ದೇಯನ್ನವರ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಉಪನ್ಯಾಸದ ಕುರಿತಾಗಿ ಮೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು. ಶರಣರಾದ ರಾಜೇಂದ್ರ. ಕಾಡನ್ನವರ ಅವರಿಂದ ಪ್ರಸಾದ ದಾಸೋಹ ನೆರವೇರಿತು..ಸುಜಾತಾ ಮತ್ತಿಕಟ್ಟಿ & ಶ್ರೀದೇವಿ ನರಗುಂದ ಅವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಪ್ರಾರಂಭದಲ್ಲಿ ವಾರದ ರೂಡಿಯoತೆ ವಚನ ಗಾಯನ ನೆರವೇರಿತು. ಸಂಘಟನೆ ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು..ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ. ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್. ಸಂಘಟನೆಯ ಕಜಾಂಚಿಗಳಾದ ಶರಣ ಸತೀಶ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಶ್ರೀ M.Y. ಮೆಣಸಿನಕಾಯಿ,ಬಸವರಾಜ ಕರಡಿಮಠ, s. s. ಪೂಜಾರ, ಶoಕರ ಶೆಟ್ಟಿ, v. k. ಪಾಟೀಲ,ಆನಂದ್ ಕರ್ಕಿ, ಸುರೇಶ್ ಹಂಜಿ, ಎ.ಬಿ. ಜೇವನಿ, ಕಮಲಾ ಗಣಾಚಾರಿ, ಅನಸೂಯಾ ಬಶೆಟ್ಟಿ, ಮಹಾದೇವಿ ಘಾಟಿ, ವಿ.ಕೆ. ಪಾಟೀಲ್, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಹೀಗೆ ಸಂಘಟನೆಯ ಕಾರ್ಯಕರ್ತರು & ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು..


Leave a Reply