This is the title of the web page
This is the title of the web page

Please assign a menu to the primary menu location under menu

State


ಕೊಪ್ಪಳ ೦೧: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಅನೇಕ ಉದ್ಯೋಗಾವಕಾಶಗಳಿದ್ದು ಸೂಕ್ತ ತರಬೇತಿ ಮತ್ತು ನೈಪುಣ್ಯತೆ ಪಡೆದುಕೊಂಡಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ಶ್ರೀ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ಸಾಂಸ್ಥಿಕ ಸಲಹೆಗಾರರಾದ ಶ್ರೀ ಎಚ್ ಪರೀಕ್ಷಿತರಾಜ್ ಹೇಳಿದರು. ಇಂದು ಇಲ್ಲಿ ನಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀ ಎ ಜಿ ಶರಣಪ್ಪ ಮಾತನಾಡಿ ಭಾರತವು ಸದ್ಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಗತ್ತಿನ ಗಮನವನ್ನು ಸೆಳೆಯುತ್ತಿದ್ದು ಮೊನ್ನೆ ನಡೆದ ಯಶಸ್ವಿ ಚಂದ್ರಯಾನ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಹಾಗೆಯೇ ಜಾಗತಿಕ ವ್ಯಾಪಾರಿ ಸಂಸ್ಥೆಗಳು ಭಾರತದಲ್ಲಿ ತಮ್ಮ ಉದ್ಯಮಗಳನ್ನು ತೆರೆಯುತ್ತಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಿದ್ದು ಅದಕ್ಕೆ ಸೂಕ್ತ ತರಬೇತಿ ಮತ್ತು ನೈಪುಣ್ಯತೆಯನ್ನು ನೀಡುವ ಸಲುವಾಗಿ ಪ್ರಥಮ ಬಾರಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ವೀರೇಶ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಕಾರ್ಯಾಗಾರದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಗಾರವು ಒಟ್ಟು ಮೂರು ಅವಧಿಗಳನ್ನು ಒಳಗೊಂಡಿದ್ದು ಪಿಯುಸಿ ನಂತರ ಲಭ್ಯವಿರುವ ಕೋರ್ಸುಗಳು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ನಾಗರೀಕ ಸೇವಾ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆಗೆ ಸಂಬಂಧಿಸಿದ ತರಬೇತಿ ನೀಡಲಾಯಿತು. ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್‌ನ ನುರಿತ ಉಪನ್ಯಾಸಕರು ತರಬೇತುದಾರರಾಗಿ ಆಗಮಿಸಿದ್ದರು.
ಉಪನ್ಯಾಸಕರಾದ ಶ್ರೀಮತಿ ಕಮಲ ಅಳವಂಡಿ, ಅಶೋಕ್ ಓಜನಹಳ್ಳಿ, ಶಿವಯ್ಯ, ಮಹಮ್ಮದ್ ಅಲಿ, ಸಂಗಮೇಶ್ ಬೇವಿನಗಿಡದ, ಶ್ರೀಮತಿ ಮಂಗಳ, ಶ್ರೀಮತಿ ಗೀತಾ ಯಕ್ಲಾಸ್‌ಪುರ್, ಶ್ರೀಮತಿ ಪದ್ಮಾವತಿ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು.


Leave a Reply