ಕೊಪ್ಪಳ:- ಕಲ್ಯಾಣ ಕರ್ನಾಟಕ ಕಲಾವಿದರೆಲ್ಲರೂ ಸೇರಿ ಮಾಡಿರುವ ಚಿತ್ರ ಅವಳು ಲೈಲಾ ಅಲ್ಲ ನಾನು ಮಜ್ನು ಅಲ್ಲಾ ಚಿತ್ರವು ರಾಜ್ಯಾದ್ಯಂತ ಇಂದು ರಾರಾಜಿಸಲಿದೆ
ದಿನಾಂಕ 8/9/2023 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಯುವಕ ಯಲ್ಲು ಪುಣ್ಯಕೋಟಿ.ನಿರ್ದೇಶಿಸಿದ್ದಾರೆ.
ಇದು ಪಕ್ಕಾ ಲವ್ ಸ್ಟೋರಿ ಆಗಿರುವುದರಿಂದ ಜನ ಮನ ಸೆಳೆಯುವಲ್ಲಿ ಯಶಸ್ಸು ಆಗಲಿದೆ ಅನ್ನುವುದು ಚಿತ್ರ ತಂಡದ ಅಭಿಪ್ರಾಯ
ಈ ಚಿತ್ರದಲ್ಲಿ ತಾವರಗೇರಾ ಹೋಬಳಿಯ ಜುಮಲಾಪುರ ಗ್ರಾಮದ ಯುವಕ ಪತ್ರಕರ್ತರಾಗಿರುವ ಅಮಾಜಪ್ಪ ಅವರು ಈ ಚಿತ್ರದ ನಾಯಕ ನಟನ ಗೆಳೆಯನಾಗಿ ಈ ಚಿತ್ರದಲ್ಲಿ ಮುಸ್ಲಿಂ ಪಾತ್ರಧಾರಿಯಾಗಿ ಅಭಿನಯಿಸಿರುವುದು ಸಂತೋಷದ ವಿಚಾರ ಮತ್ತು ಜುಮಲಾಪುರ ಗ್ರಾಮದ ಬಾಲಕಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ.
ಒಟ್ಟಿನಲ್ಲಿ ಎಲ್ಲಾ ಉತ್ತರ ಕರ್ನಾಟಕದ ಕಲಾವಿದರೂ ಎಲ್ಲರೂ ಸೇರಿ ಮಾಡಿರುವ ಈ ಚಿತ್ರ ….ಅವಳು ಲೈಲಾ ಅಲ್ಲ ನಾನು ಮಜ್ನು ಅಲ್ಲಾ… ಕಾಲೇಜು ಹುಡುಗನ ಪ್ರೇಮ ಪ್ರಸಂಗದಲ್ಲಿ ಇಬ್ಬರೂ ನಾಯಕಿಯರು ಅಭಿನಯಿಸಿದ್ದಾರೆ. ಒಂದು ಹೈಸ್ಕೂಲ್ ಜೀವನ ಇನ್ನೊಂದು ಕಾಲೇಜು ಜೀವನ ಆಧಾರಿತವಾಗಿ ಈ ಚಿತ್ರ ದಿನಾಂಕ 8/9/2023 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲೀದೆ.
ನಾಯಕ ನಟನಾಗಿ ಅಜೇಯ ಸಿಂಧನೂರ ಅಭಿನಯಿಸಿದ್ದಾರೆ ನಾಯಕಿಯಾಗಿ ನಿಹಾರಿಕಾ ಮತ್ತು ಅಶ್ವಿನಿ ಹುಬ್ಬಳ್ಳಿ ಯವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹಾಸ್ಯ ನಟರಾಗಿ ಕರಡಿ ಸೀನ ಎಂದು ಖ್ಯಾತಿ ಪಡೆದಿರುವ ಡಿಂಗ್ರಿ ನರೇಶ ಅಭಿನಯಿಸಿದ್ದಾರೆ.
ಒಟ್ಟಿನಲ್ಲಿ ನಮ್ಮ ಭಾಗದವರು ನಿರ್ಮಾಣ ಮಾಡಿರುವ ಈ ಚಿತ್ರವು ಶತದಿನೋತ್ಸವ ಆಚರಿಸಲಿ ಸಿನಿ ಪ್ರೇಕ್ಷಕರ ಆಶಯವಾಗಿದೆ.ಜೊತೆಗೆ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಶುಭಕೋರುತ್ತೇವೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ