ಬೈಲಹೊಂಗಲ: ಪ್ರತಿಯೊಬ್ಬ ರೈತನಿಗೆ ಬೇಕಾಗುವ ಸಾಲ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುವ ಸಹಕಾರಿ ಬ್ಯಾಂಕಗಳಲ್ಲಿ ಮರಡಿ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಒಂದಾಗಲಿ.
ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದ ಪ್ರತಿಯೊಬ್ಬ ರೈತರ ಬೆನ್ನಲುಬಾಗಿ ನಿಲ್ಲಲಿ ಎನ್ನುವ ಉದ್ದೇಶದಿಂದ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆ ಮಾಡಿದ ಗಣ್ಯರು.
ದೇಶದಲ್ಲಿ ಇತ್ತಿಚಿನ ದಿನಗಳಲ್ಲಿ ರೈತ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಆದ್ದರಿಂದ ಈ ಬ್ಯಾಂಕ್ ಪ್ರತಿಯೊಬ್ಬ ರೈತರ ಜೊತೆ ನಿಂತು ಕೆಲಸ ಮಾಡಲಿದೆ ಹಾಗೇಯೆ ಸಮಾಜದಲ್ಲಿನ ಕಷ್ಟವನ್ನು ಮೆಟ್ಟಿ ನಿಲ್ಲುವ ಮೂಲಕ ಸದಾಕಾಲ ನಿಮ್ಮ ಜೊತೆಯಾಗಿ ನಿಂತು ಮರಡಿಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸಲಿ ಎಂದು ಶುಭಹಾರೈಸಿದರು.
ಇದೇ ದಿವ್ಯಸಾನಿಧ್ಯ ವಹಿಸಿದ ಶ್ರೀ ರಾಚೋಟಿ ಮಹಾಸ್ವಾಮಿಜಿ,ತಾಲೂಕಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಸನಗೌಡ ಪಾಟೀಲ,ಶಾಸಕರಾದ ಮಹಾಂತೇಶ ದೊಡಗೌಡರ, ಮಾಜಿ ಶಾಸಕರು ಹಾಗೂ ಕಾಡಾ ಅಧ್ಯಕ್ಷರಾದ ವಿಶ್ವನಾಥ ಪಾಟೀಲ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾಬಾಸಾಹೇಬ್ ಪಾಟೀಲ ಸೇರಿದಂತೆ ಇನ್ನುಳಿದ ಗಣ್ಯ ವ್ಯಕ್ತಿಗಳಿಂದ ಇವತ್ತು ವಕ್ಕುಂದ ಗ್ರಾಮದಲ್ಲಿ ಮರಡಿಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಜ್ಯೋತಿ ಬೆಳಗಿಸುವ ಮೂಲಕ ನೂತನ ಕಟ್ಟಡ ಉದ್ಘಾಟನೆ ನೇವೇರಿಸಿದರು.
ಆಡಳಿತ ಮಂಡಳಿ :ಅಧ್ಯಕ್ಷರಾದ ಗಜದಂಡ ಸುತಗಟ್ಟಿ, ಉಪಾಧ್ಯಕ್ಷರಾದ ನಾಗನಗೌಡ ಶೀಲವಂತರ,ಇನ್ನುಳಿದ ಸದಸ್ಯರು ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಬೈಲಹೊಂಗಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಭಾಷ ಸಂಪಗಾಂವಿ, ಸಿ.ಆರ್.ಪಾಟೀಲ, ಮಹಾಂತೇಶ ಮೂಗಿ,ಗುರು ಮೆಟಗುಡ್,ಬಸನಗೌಡ ಪೋಲಿಸ್ ಪಾಟೀಲ,ದೇಮನಗೌಡ ಶೀಲವಂತರ,ಶ್ರೀಮತಿ ಶಾಹೀನ್ ಅಖ್ತರ್,ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗಜದಂಡ ಸುತಗಟ್ಟಿ ವಂದಣಾರ್ಪನೆ ಮಾಡಿದರು, ಸಿದ್ದನಗೌಡ ಪಾಟೀಲ ನಿರೂಪಣೆ ಮಾಡಿದರು.