This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಗ್ರಾಮೀಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಚನ್ನರಾಜ ಹಟ್ಟಿಹೊಳಿ


ಬೆಳಗಾವಿ : ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಹಿರೇ ಬಾಗೇವಾಡಿ ಗ್ರಾಮದ ಬೀದಿ ದೀಪಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶ್ರಮಿಕರು ಮತ್ತು ರೈತರೇ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ನೀರು, ಬೀದಿ ದೀಪ ಮೊದಲಾದ ಮೂಲ ಸೌಕರ್ಯಗಳು ಸಮರ್ಪಕವಾಗಿ ಸಿಗಬೇಕು.

ಈ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶ್ರಮ ವಹಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡುತ್ತ ಬಂದಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧಳಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಿ. ಸಿ. ಪಾಟೀಲ್, ಸುರೇಶ ಇಟಗಿ, ಬಿ ಎನ್ ಪಾಟೀಲ, ಗೌಸ್ ಜಾಲಿಕೊಪ್ಪ, ಗೌಡಪ್ಪ ಜಿರಲಿ, ಶಿಪು ಹಳೇಮನಿ, ರಾಜಣ್ಣ ಪಾಟೀಲ, ಅನಿಲ ಪಾಟೀಲ, ಸಯ್ಯದ್ ಸನದಿ, ಸಲೀಂ ಸತ್ತಿಗೇರಿ, ನಿಂಗಪ್ಪ ತಳವಾರ, ತಮ್ಮಣ್ಣ ಗಾಣಗಿ, ಬಿ. ಆರ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply