This is the title of the web page
This is the title of the web page

Please assign a menu to the primary menu location under menu

State

ಭಾಗ್ಯನಗರ: ದೇವಸ್ಥಾನಕ್ಕೆ ಮೀಸಲಿರಿಸಿದ ನಿವೇಶನ ಮಂಜೂರಿಗೆ ಆಕ್ಷೇಪಣೆ ಆಹ್ವಾನ


ಕೊಪ್ಪಳ ಜುಲೈ ೧೨ : ಭಾಗ್ಯನಗರ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ದೇವಸ್ಥಾನಕ್ಕಾಗಿ ಮೀಸಲಿರಿಸಿದ ನಿವೇಶನವನ್ನು ಸಂಘವೊಂದಕ್ಕೆ ಮಂಜೂರು ಮಾಡಲು ಆಕ್ಷೇಪಣೆ ಆಹ್ವಾನಿಸಲಾಗಿದೆ.
ಭಾಗ್ಯನಗರ ಪಟ್ಟಣ ವ್ಯಾಪ್ತಿಯ ಬಿನ್‌ಶೇತ್ಕಿ ಸರ್ವೇ ನಂಬರ ೧೩/೨ರ ಐದು ಎಕರೆಯ ವಸತಿ ವಿನ್ಯಾಸದಲ್ಲಿ ದೇವಸ್ಥಾನಕ್ಕಾಗಿ ಮೀಸಲಿರಿಸಿದ ನಿವೇಶನ ವಿಸ್ತೀರ್ಣ ಪೂರ್ವ ಪಶ್ಚಿಮ ೪೦ ಅಡಿಗಳು ಹಾಗೂ ಉತ್ತರ ದಕ್ಷಿಣ ೪೦ ಅಡಿಗಳು ಸೇರಿ ಒಟ್ಟು ೧೬೦೦ ಚದರಡಿಗಳು ಮತ್ತು ಇದರ ಚಕ್ಕುಬಂದಿ ಪೂರ್ವಕ್ಕೆ ೨೫ಅಡಿ ರಸ್ತೆ, ಪಶ್ಚಿಮಕ್ಕೆ ಪಾರ್ಕಗಾಗಿ ಮೀಸಲಿರಿಸಿದ ನಿವೇಶನ, ಉತ್ತರಕ್ಕೆ ಈ ಸರ್ವೇ ನಂಬರಿನ ಉಳಿದ ಜಮೀನು ಮತ್ತು ದಕ್ಷಿಣಕ್ಕೆ ಪ್ಲಾಟ ನಂಬರ್ ೧೪, ಈ ಚಕ್ಕುಬಂದಿ ಮಧ್ಯದಲ್ಲಿರುವ ಈ ನಿವೇಶನವನ್ನು ಶ್ರೀ ಯೋಗಿನಾರಾಯಣ ಕೈವಾರ ತಾತಯ್ಯನವರ ದೇವಸ್ಥಾನ ನಿರ್ಮಿಸಲು ಕೊಪ್ಪಳ ತಾಲೂಕು ಬಲಿಜ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ) ಕೊಪ್ಪಳ ಇವರಿಗೆ ಸರ್ಕಾರದಿಂದ ನಿಗದಿ ಪಡಿಸುವ ದರಕ್ಕೆ ಮಂಜೂರಿ ಮಾಡುವ ಆಕ್ಷೇಪಣೆ ಕೋರಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಇದಕ್ಕೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ಜುಲೈ ೨೬ರೊಳಗಾಗಿ ಭಾಗ್ಯನಗರ ಪ.ಪಂ ಕಾರ್ಯಾಲಯಕ್ಕೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply