ಕೊಪ್ಪಳ ಜುಲೈ ೧೫ : ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಾಗೂ ವಸತಿ ನಿಲಯಕ್ಕೆ ನಿವೇಶನಗಳನ್ನು ಮಂಜೂರಿ ಮಾಡುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಕುಷ್ಟಗಿ ಪಟ್ಟಣದ ವಾರ್ಡ ನಂ.೦೩ರಲ್ಲಿ ಸರ್ವೇ ನಂ. ೧೦೫/೬ ಹಾಗೂ ೧೦೫/೭ರ ರಾಮಣ್ಣ ಶಂಕ್ರಪ್ಪ ಗದ್ದಿ ಇವರ ವಸತಿ ವಿನ್ಯಾಸದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನದ ಕ್ಷೇತ್ರ ೧೮೨೮ ಚ.ಮೀ ಜಾಗೆಯನ್ನು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡಕ್ಕೆ ಒದಗಿಸಲು ೨೦೨೨ರ ಆಗಸ್ಟ್ ೧೬ರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಾಗೂ ಸರ್ವೇ ನಂ. ೧೨೭/೨ ನಾಗಪ್ಪ ಚನ್ನಬಸಪ್ಪ ಹೊಸವಕ್ಕಲ ಇವರ ವಿನ್ಯಾಸದಲ್ಲಿ ಕ್ಷೇತ್ರ ೬೪೮ ಚ.ಮೀ ಜಾಗೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಷ್ಟಗಿ ಶಾಖೆಗೆ ನೀಡಲು ೨೦೨೩ರ ಫೆಬ್ರವರಿ ೨೭ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ನೀಡಿದ್ದು, ಈ ನಿವೇಶನಗಳನ್ನು ಸಂಬಂಧಪಟ್ಟವರಿಗೆ ಮಂಜೂರಿ ನೀಡುವಲ್ಲಿ ಸಾರ್ವಜನಿಕರಿಂದ ತಂಟೆ, ತಕರಾರು ಆಕ್ಷೇಪಣೆಗಳಿದ್ದಲ್ಲಿ ತಮ್ಮ ತಕರಾರುಗಳನ್ನು ೧೫ ದಿನಗಳ ಒಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಕುಷ್ಟಗಿಯಲ್ಲಿ ವಸತಿ ನಿಲಯಕ್ಕೆ, ರೆಡ್‌ಕ್ರಾಸ್ ಸಂಸ್ಥೆಗೆ ನಿವೇಶನ ಮಂಜೂರಾತಿ: ಆಕ್ಷೇಪಣೆ ಆಹ್ವಾನ
ಕುಷ್ಟಗಿಯಲ್ಲಿ ವಸತಿ ನಿಲಯಕ್ಕೆ, ರೆಡ್‌ಕ್ರಾಸ್ ಸಂಸ್ಥೆಗೆ ನಿವೇಶನ ಮಂಜೂರಾತಿ: ಆಕ್ಷೇಪಣೆ ಆಹ್ವಾನ
Suresh15/07/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023