WhatsApp Group
Join Now
ಬೆಳಗಾವಿ: ಸಮಾಜದಲ್ಲಿ ವೃದ್ಧಾಶ್ರಮಗಳು ಕಡಿಮೆಯಾಗಬೇಕು.ಕುಟುಂಬ ಸದಸ್ಯರು ವೃದ್ಧ ತಂದೆತಾಯಿಗಳನ್ನು ವೃಧ್ಧಾಶ್ರಮಗಳಿಗೆ ಕಳುಹಿಸದೆ ಮನೆ ಯಲ್ಲಿಯೇ ಅವರ ಆರೈಕೆ ಮಾಡಬೇಕು. ಅವರ ಸೇವೆಯೇ ಭಗವಂತನ ಸೇವೆ ಎಂದರಿತಾಗ ಮಾತ್ರ ತಂದೆ ತಾಯಿಯ ಋಣ ತೀರಿಸಬಹುದಾಗಿದೆ.ಅವರಿಂದ ಪಡೆದ ನಮ್ಮ ಜನ್ಮ ಸಾರ್ಥಕವಾಗುವದು ಅಂತಾ ಇಂದಿಲ್ಲಿ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅದ್ಯಕ್ಷರಾದ ಪ್ರೊ.ಉದಯಸಿಂಗ ರಜಪೂತ ಹೇಳಿದರು.
ನಾಗನೂರ ಶ್ರೀ ಶಿವಬಸವ ಟ್ರಸ್ಟಿನ ಶ್ರೀ ಮತಿ ಚಿನ್ನಮ್ಮ ಹಿರೆಮಠ ವೃಧ್ಧಾಶ್ರಮ ಬಸವನಕುಡಚಿಯಲ್ಲಿರು ವೃಧ್ಧಾಶ್ರಮಕ್ಕೆ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ವತಿಯಿಂದ ಸುಮಾರು ೫೦,೦೦೦ ರೂಪಾಯಿ ಮೌಲ್ಯದ ದಿನನಿತ್ಯದ ಅವಶ್ಯಕ ವಸ್ತುಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ರೊ.ಅಶೋಕ ಮಳಗಲಿ ಅವರು ಹಾಸ್ಯ ಕಾರ್ಯಕ್ರಮ ನೀಡಿ ರಂಜಿಸಿದರು.
ನಂದನ ಬಾಗಿ,ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ, ಅನಿಲ ಬಾಗಿ,ಅಶೋಕ ಬದಾಮಿ,ರಾಮ ಸಾಂಗಲೆ,ಸತೀಶ ಮಿಠಾರೆ,ಸತೀಶ ನಾಯಿಕ,ಡಾ.ವಿಜಯ ಪೂಜಾರ,ಪ್ರೊ.ಕೊಲ್ಹಾಪುರೆ,ಮಹಿಳಾ ಸಾಂತ್ವನ ಕೇಂದ್ರದ ಶ್ರೀಮತಿ ಮಧು,ಆಶ್ರಮದ ಆಡಳಿತಾಧಿಕಾರಿ ಶ್ರೀ ಮತಿ ಚೌಗಲಾ ಉಪಸ್ಥಿತರಿದ್ದರು