This is the title of the web page
This is the title of the web page

Please assign a menu to the primary menu location under menu

Local News

ಮಾ.೨೦ರಂದು ಮೂಡಲಗಿಯಲ್ಲಿ ಮುಸ್ಲಿಂ ಸಮಾಜ ಬೃಹತ ಸಮಾವೇಶ: ಮುಲ್ಲಾ


ಮೂಡಲಗಿ: ಅರಭಾವಿ ಮತ ಕ್ಷೇತ್ರದಲ್ಲಿ ಸರ್ವ ಧರ್ಮ ಹಿತ ಚಿಂತಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಎಪ್ರೀಲ್-ಮೇ ನಲ್ಲಿ ನಡೆಯುವ ರಾಜ್ಯದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಬೆಂಬಲಾರ್ಥವಾಗಿ ಮೂಡಲಗಿ ಪಟ್ಟಣದ ತಹಶೀಲ್ದಾರ ಕಛೇರಿ ಹತ್ತಿರ ಮಾ.೨೦ ರಂದು ಮಧ್ಯಹ್ನಾ ೧೨ ಗಂಟೆಗೆ ಅರಭಾವಿ ಮತ ಕ್ಷೇತ್ರದ ಮುಸ್ಲಿಂ ಸಮಾಜ ಭಾಂದವರಿಂದ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲ್ಲಾಗಿದೆ ಎಂದು ಮುಸ್ಲಿಂ ಸಮಾಜ ಮುಖಂಡರಾದ ಎಚ್.ಡಿ.ಮುಲ್ಲಾ ಹೇಳಿದರು.
ಅವರು ಶನಿವಾರದಂದು ಪಟ್ಟಣದ ಅಂಜುಮನ್-ಎ-ಇಸ್ಲಾಂ ಎಜ್ಯಕೇಷನ &ಸೋಶಿಯಲ್ ಡೆವಲಮೆಂಟ ಸೊಸೈಟಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಭಾವಿ ಮತ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಸ್ಲಿಂ ಸಮಾಜಕ್ಕೆ ಶೈಕ್ಷಣಿ, ಸಾಮಾಜಿಕ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿ ಹರಿಕಾರ ಬಾಲಚಂದ್ರ ಜಾರಕಿಹೊಳಿ ವ್ಯಕ್ತಿಯನ್ನು ನೋಡಿ ಮುಸ್ಲಿಂ ಸಮಾಜ ಭಾಂದವರು ಒಂದಾಗಿ ಒಗ್ಗಟಿನಿಂದ ಸಮಾವೇಶ ಮಾಡುತ್ತಿದೇವೆ ಎಂದರು.
ಮುಖಂಡ ಲಾಲಸಾಬ ಸಿದ್ದಾಪೂರ ಮಾತನಾಡಿ, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಿಹೊಳಿ ಅವರು ಮುಸ್ಲಿಂ ಸಮಾಜಕ್ಕೆ ಮಾಡಿರುವ ಅಭಿವೃದ್ಧಿ ಹಾಗೂ ಸಮಾಜ ಮೇಲಿನ ಕಾಳಜಿಯನ್ನು ನಮ್ಮ ಸಮಾಜ ಭಾಂದವರಿಗೆ ತಿಳಿಸಿಸಲು ಹಾಗೂ ಮನವರಿಕೆ ಮಾಡಿಕೊಡಲ್ಲು ಸಮಾವೇಶ ಏರ್ಪಡಿಸಲಾಗಿದೆ ಎಂದರು.
ಮೂಡಲಗಿ ಅಂಜುಮನ್-ಎ-ಇಸ್ಲಾಂ ಎಜ್ಯಕೇಷನ ಮತ್ತು ಸೋಶಿಯಲ್ ಡೆವಲಮೆಂಟ ಸೊಸೈಟಿಯ ಅಧ್ಯಕ್ಷ ಮಲೀಕ ಹುಣಶ್ಯಾಳ ಮಾತನಾಡಿ, ಮಾ.೨೦ ರಂದು ನಡೆಯು ಬೃಹತ ಮುಸ್ಲಿಂ ಸಮಾಜದ ಸಮಾವೇಶದಲ್ಲಿ ಮುಸ್ಲಿಂ ಮತ್ತು ಎಲ್ಲ ಹಿಂದು ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೋಳಿಸಬೇಕೆಂದರು.
ಈ ಸಂಂಧರ್ಭಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಅನ್ವರ ನದಾಫ್, ಹುಸೇನಸಾಬ ಶೇಖ, ನನ್ನುಸಾಬ ಶೇಖ, ಅಬ್ದುಲಗಫಾರ ಡಾಂಗೆ, ಹಾಸಿಮ ನಗರಾಚಿ, ಇಕಬಾಲ ಸರ್ಕಾವಸ್, ಇಸ್ಮಾಯಿಲ ಲಾಡಖಾನ, ಮೈನು ಪಟೇಲ, ಶಾನೂರ ಮೊಗಲ, ಇದರೀಶ ಕಲಾರಕಪ್ಪ, ಅಮ್ಮಿನಶಾ ಪಿರಜಾದೆ, ರಸುಲ ಮಿರ್ಜಾನಾಯ್ಕ, ಚಾಂದಸಾಬ ದೇಶಾಯಿ, ಶಾಬುದಿನ ಹುಣಶ್ಯಾಳ, ಸುಲೇಮಾನ ಮುಲ್ತಾನಿ ಮತ್ತಿತರರು ಉಪಸ್ಥಿತರಿದ್ದರು.


Leave a Reply