ಕುಷ್ಟಗಿ:- ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುಷ್ಠಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ದನರೆಡ್ಡಿ ಯವರು ಕುಷ್ಟಗಿ ಕ್ಷೇತ್ರದ ಅಭ್ಯರ್ಥಿಯಾದ ಸಿ.ಎಂ. ಹಿರೇಮಠ ಪರವಾಗಿ ಪ್ರಚಾರ ಮಾಡಲು ದಿನಾಂಕ :25-04-2023ರಂದು ಆಗಮಿಸಲಿದ್ದಾರೆ ಎಂದು ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಸಿ ಎಂ ಹಿರೇಮಠ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವಿವರ ಈ ಕೆಳಗಿನಂತಿದೆ
ಬೆಳಗ್ಗೆ: 10-00 ಗಂಟೆಗೆ ವಕ್ಕ೦ದುರ್ಗದ ದುರ್ಗಾದೇವಿ ಪೂಜೆ ಸಲ್ಲಿಸಿ ನಿಲೋಗಲ್ಲ ಮಾರ್ಗವಾಗಿ ಹನಮನಾಳ ತಲುಪುವುದು.
11-00 ಗಂಟೆಗೆ ಹನಮನಾಳ ಗ್ರಾಮದಲ್ಲ ಕಡಿವಾಲ ಕ್ರಾಸ್‌ನಿಂದ ಹಳೇ ಬಸ್‌ನಿಲ್ದಾಣ ವರಗೆ, ರೋಡ್ ಶೋ ನಂತರ ಜಹಗೀರ ಗುಡದೂರ ಮೂಲಕ ಹನಮಸಾಗರಕ್ಕೆ ಪ್ರಯಾಣ.
ಮಧ್ಯಾಹ್ನ : :01-00 ಗಂಟೆಗೆ ಹನಮಸಾಗರದಲ್ಲಿ ಕನಕದಾಸ ಸರ್ಕಲ್ ನಿಂದ ಹೈಸ್ಕೂಲ್ ವರೆಗೆ ರೋಡ್ ಶೋ ಮತ್ತು ಸಾರ್ವಜನಿಕ ಭಾಷಣ
ಮಧ್ಯಾಹ್ನ : 02-30 ಗಂಟೆಗೆ ಕುಷ್ಟಗಿ ಹಳೇ ಬಜಾರ ರಸ್ತೆ ಮಾರ್ಗವಾಗಿ ಕನಕದಾಸ ಸರ್ಕಲ್, ಮಾರುತಿ ಸರ್ಕಲ್ ಮೂಲಕ ಬಸವೇಶ್ವರ ಸರ್ಕಲ್ ತಲುಪಿ ಸಾರ್ವಜನಿಕ ಭಾಷಣ.
ಮಧ್ಯಾಹ್ನ : 04-00 ಗಂಟೆಗೆ ಹಿರೇಮನ್ನಾಪೂರ ಮೂಲಕ ತಾವರಗೇರಾ ಗೆ ಪ್ರಯಾಣ ಪ್ರವಾಸ ಮಂದಿರ ದಿಂದ ಬಸ್ ನಿಲ್ದಾಣವರೆಗೆ ಮೆರವಣಿಗೆ ನಂತರ ಸಾರ್ವಜನಿಕ ಬಾಷಣ.
ಸಾಯಂಕಾಲ : 06-00 ಗಂಟೆಗೆ ಎಸ್ ಗಂಗನಾಳದಲ್ಲಿ ಶ್ರೀ ಪಂಚಮುಖಿ ಹನುಮಾನ ದೇವಸ್ಥಾನ ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತದನಂತರ ಗಂಗಾವತಿಗೆ ಪ್ರಯಾಣ ಬೆಳೆಸುವರು.
ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವದೇನಂದರೆ ಮೇಲಿನ ಪ್ರವಾಸದವರೆಗೆ ಆಯಾ ಹೋಬಳಿಯ ಮತದಾರರು ಪಕ್ಷದ ಕಾರ್ಯಕರ್ತರು ಭಾಗವಹಿಸಿ ಮಾನ್ಯ ಶ್ರೀ ಜನಾರ್ಧನ ರೆಡ್ಡಿಯ ಸಾರ್ವಜನಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಸಿ. ಎಂ. ಹಿರೇಮಠ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಕಟಣೆಗೆ ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ