This is the title of the web page
This is the title of the web page

Please assign a menu to the primary menu location under menu

Local News

ಅ.೨೮ ರಂದು ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ


ಬೆಳಗಾವಿ,ಅ.೧೦ : ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಾದ ರಾಮದುರ್ಗ ಪುರಸಭೆ ವಾರ್ಡ ನಂಬರ್ ೦೯(ಹಿಂದುಳಿದ ವರ್ಗ ಬ) ಹಾಗೂ ಸದಲಗಾ ಪುರಸಭೆಯ ವಾರ್ಡ್ ನಂಬರ್ ೦೫(ಹಿಂದುಳಿದ ವರ್ಗ ಅ), ೧೨ (ಸಾಮಾನ್ಯ), ೧೫(ಹಿಂದುಳಿದ ವರ್ಗ ಅ ಮಹಿಳೆ) ಮತ್ತು ೧೬(ಹಿಂದುಳಿದ ವರ್ಗ ಅ ಮಹಿಳೆ) ರಲ್ಲಿ ಅಕ್ಟೋಬರ್ ೨೮ ರಂದು ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅಧಿಸೂಚನೆ ಹೋರಡಿಸಿದ್ದಾರೆ.ನಗರ ಸ್ಥಳೀಯ ಸಂಸ್ಥೆಗಳ ಪುರಸಭೆ/ಪಟ್ಟಣ ಪಂಚಾಯತಿ ಕೌನ್ಸಿಲರುಗಳ ಸ್ಥಾನಕ್ಕೆ ಅಕ್ಟೋಬರ್ ೧೭ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲಿಸುವ ದಿನಾಂಕ ಅಕ್ಟೋಬರ್ ೧೮ ಹಾಗೂ ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳು ಅಕ್ಟೋಬರ್ ೨೦ ರಂದು ಕೊನೆಯ ದಿನಾಂಕವಾಗಿದೆ.
ಅಕ್ಟೋಬರ್ ೨೮ ರಂದು ಮತದಾನ ಬೆಳಿಗ್ಗೆ ೭ ಗಂಟೆಯಿಂದ ಸಾಯಂಕಾಲ ೫ ಗಂಟೆಯವರಗೆ ನಡೆಯಲಿದೆ. ಒಂದು ವೇಳೆ ಮರು ಮತದಾನ ಇದ್ದಲ್ಲಿ ಅಕ್ಟೋಬರ್ ೩೦ ರಂದು ನಡೆಸಲಾಗುವುದು ಹಾಗೂ ಮತಗಳ ಏಣಿಕೆಯನ್ನು ಅಕ್ಟೋಬರ್ ೩೧ ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ


Gadi Kannadiga

Leave a Reply