This is the title of the web page
This is the title of the web page

Please assign a menu to the primary menu location under menu

State

ಕರ್ನಾಟಕ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ನಮ್ಮ ಸಂಘದ ಮೇಲೆ ಜಗದ್ಗುರು ತೋಂಟದ ಶ್ರೀಗಳ ಆಶಿರ್ವಾದ ಸದಾ ಇರಲಿ: ಮುರಗೇಶ ಶಿವಪೂಜೆ


ಗದಗ: ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ-ಬೆಂಗಳೂರು, ಈ ಸಂಘದ ಉದ್ಘಾಟನೆಗೆ ಜಗದ್ಗುರು ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಆಗಮಿಸಿ ಹಾರೈಸಿದ್ದರು, ಅವರ ಆಶಿರ್ವಾದ ಶ್ರೀರಕ್ಷೆ ನಮ್ಮ ಮೇಲೆ ಸದಾ ಹಿಗೆ ಇರಲಿ ಎಂದು ಸಂಘದ ರಾಜ್ಯಾದ್ಯಕ್ಷರಾದ ಮುರಗೇಶ ಶಿವಪೂಜೆ ಅವರು ತಿಳಿಸಿದರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂಘ ಯಾವುದೇ ಸರ್ಕಾರಿ ಸವಲತ್ತು ಪಡೆಯದೆ ನಡೆಯುತ್ತಿದೆ, ನಮ್ಮ ಸಂಘದ ಸದಸ್ಯರು ಅಪಘಾತದಂತಹ ಪ್ರಕರಣಗಳಲ್ಲಿ ಅಸುನಿಗಿದರೆ, ಅಂತವರಿಗೆ ಇಷ್ಟು ದಿನದಿಂದ ಎರಡು ಲಕ್ಷದವರೆಗೆ ಇನ್ಸೂರೆನ್ಸ್ ಕೊಡುತ್ತಿದ್ದೆವು ಆದರೆ, ಇನ್ನು ಮುಂದೆ ಆ ಮೊತ್ತವನ್ನು ನಾಲ್ಕು ಲಕ್ಷಕ್ಕೆ ಎರಿಸುವ ಚಿಂತನೆ ಮಾಡುತ್ತಿದ್ದೆವೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಪತ್ರಕರ್ತರ ಹತ್ತಾರು ಸಂಘಗಳು ಇದ್ದರೂ, ವಾರ್ತಾಧಿಕಾರಿಗಳು ಎಲ್ಲರನ್ನು ಗಮನಕ್ಕೆ ತಗೆದುಕೊಂಡು ಹೊಗಬೇಕು ಎಂದು ಜಿಲ್ಲಾ ವಾರ್ತಾಧಿಕಾರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿಕೊಂಡು ಮಾತನಾಡಿದ ತೋಂಟದ ಶ್ರೀಸಿದ್ದರಾಮ ಮಹಾಸ್ವಾಮಿಗಳು, ಪತ್ರಕರ್ತರು ದುಷ್ಟರಿಗೆ ಎದೆಗುಂದದೆ, ನಿಸ್ವಾರ್ಥವಾಗಿ, ದೈರ್ಯಶಾಲಿಗಳಾಗಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ನೈಜವಾಗಿ ಬಿತ್ತರಿಸುತ್ತಾರೆ, ಈ ಸಂದರ್ಭದಲ್ಲಿ ಕೇಲವೊಂದು ಕಷ್ಟಗಳನ್ನು ಅವರು ಎದುರಿಸಬಹುದು, ಅಂತಹ ಸಂದರ್ಭದಲ್ಲಿ ಸಮಾಜ ಅವರ ಬೆನ್ನಿಗೆ ನಿಲ್ಲಬೇಕು ಎಂದು ಜಗದ್ಗುರು ತೊಂಟದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ತಮ್ಮ ಅಭಿಮತ ವ್ಯಕ್ತಪಡಿಸಿದರು.

ದೇಶದ ಅಭಿವ್ರುದ್ದಿಯಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದಿದೆ, ಸರ್ಕಾರ ತಪ್ಪು ಮಾಡುತ್ತಿದ್ದಾಗ ಕಣ್ಣು ತೇರೆಸುವ ಕೇಲಸವನ್ನು ಪತ್ರಕರ್ತರು ಮಾಡುತ್ತಾರೆ, ದೇಶದ ಗಣ್ಯರ ಬಗ್ಗೆ, ಸ್ವಾತಂತ್ರ ಹೊರಾಟಗಾರರ ಬಗ್ಗೆ ಲೇಖನಿಗಳನ್ನು ಬರೆದು, ಸಮಾಜಕ್ಕೆ ಒಳ್ಳೆಯ ಹವ್ಯಾಸ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮೂಲಕ ಪತ್ರಕರ್ತರು ಈ ದೇಶದ ಬೆನ್ನೆಲುಬಾಗಿ ನಿಂತಿದ್ದಾರೆ, ಪತ್ರಕರ್ತರು ಅಧ್ಯಯನಶೀಲರಾಗಿ ನೈಜ ಚಿತ್ರಣವನ್ನು ಸಮಾಜಕ್ಕೆ ತೊರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ವಿ.ಪ ಸದಸ್ಯರಾದ ಪ್ರೋ: ಎಸ್ ವ್ಹಿ ಸಂಕನೂರ್ ಅವರು ಮಾತನಾಡಿ, ನಮ್ಮ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಂಬ ಮೂರು ಅಂಗಗಳಿವೆ, ಈ ಮೂರು ಅಂಗಗಳು ತಪ್ಪು ಮಾಡುತ್ತಿದ್ದರೆ ಅವುಗಳನ್ನು ಎತ್ತಿಹಿಡಿಯಲು ಪತ್ರಿಕಾ ರಂಗ ಎಂಬ ನಾಲ್ಕನೇ ಅಂಗ ಬಹು ಮುಖ್ಯವಾಗಿದೆ, ಸಮಾಜ ಮತ್ತು ಸರ್ಕಾರ ನಡುವಿನ ಕೊಂಡಿಯಾಗಿ ಪತ್ರಿಕಾ ಮಾದ್ಯಮ ಕೇಲಸ ಮಾಡತ್ತಿವೆ, ಸಮಾಜದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾದಾಗ, ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಅನ್ಯಾಯವನ್ನು ಸರಿಪಡಿಸುವ ಕೇಲಸವನ್ನು ಪತ್ರಕರ್ತರು ಮಾಡಬೇಕು, ಯಾವುದೇ ಪಕ್ಷದ ಶಾಸಕರು ಕೇಲಸ ಮಾಡದಿದ್ದರೆ, ನಿರ್ದಾಕ್ಷಿಣ್ಯವಾಗಿ ಅವರನ್ನು ಎಚ್ಚರಿಸುವ ರೀತಿ ಬರೆಯಬೇಕು ಎಂದು ಪತ್ರಕರ್ತರಿಗೆ ಕಿವಿಮಾತು ಹೆಳಿದರು.

ಸ್ಥಳಿಯ ಶಾಸಕರು ಹಾಗೂ ಮಹಾರಾಷ್ಟ್ರ ಕಾಂಗ್ರೇಸ್ ಉಸ್ತುವಾರಿಯಾದ ಡಾ: ಎಚ್ ಕೆ ಪಾಟೀಲರು ಮಾತನಾಡಿ, ೯೫% ಮಾದ್ಯಮಗಳು ಹಲವು ಕಂಪನಿಗಳ ಹಿಂಬಾಲಕರಾಗಿ, ಕೇಲವು ಪಕ್ಷಗಳ ಹಿಂದೆ ಜೊತು ಬಿದ್ದಿರುವುದರಿಂದ ಸತ್ಯ ಹೊರಗೆ ತರಲು ಸಾದ್ಯವಾಗುತ್ತಿಲ್ಲ ಆದರೆ, ಇತ್ತಿಚಿನ ದಿನಗಳಲ್ಲಿ ಸೋಸಿಯಲ್ ಮೀಡಿಯಾ ಬೆಳಕಿಗೆ ಬಂದಿದ್ದರಿಂದ, ಸತ್ಯದ ಅರಿವು ಜನರಿಗೆ ನಿಧಾನವಾಗಿ ಅರ್ಥ ಆಗುತ್ತಿದೆ, ಇತ್ತಿಚಿನ ದಿನಗಳಲ್ಲಿ ಮಾದ್ಯಮವು ತನ್ನ ಶಕ್ತಿಯನ್ನು ಕಳೆಕೊಳ್ಳುತ್ತಿದೆ ಇದರಿಂದ ಹೊರಗೆ ಬರಬೇಕು, ದೇಶ ತನ್ನ ಪ್ರಜಾಪ್ರಭುತ್ವವನ್ನು ಕಳೆದುಕೊಂಡು ಚುನಾಯಿತ ಸರ್ವಾಧಿಕಾರ ಹೊಂದಿದೆ, ಸತ್ಯವಾದ ಮೌಲ್ಯಗಳನ್ನು ಕಳೆದುಕೊಂಡಿದೆ, ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ, ನಮ್ನ ದೇಶ ಹಸಿವಿನ ಪ್ರಮಾಣದಲ್ಲಿ ಈ ಹಿಂದೆ ೭೦ ನೇ ಸ್ಥಾನದಲ್ಲಿ ಇತ್ತು ಆದರೆ, ಈಗ ೯೩ ನೇ ಸ್ಥಾನಕ್ಕೆ ಏರಿಕೆ ಆಗಿದೆ, ಇದನ್ನು ಯಾವ ಮಾದ್ಯಮಗಳು ಬಿತ್ತರಿಸುವುದಿಲ್ಲ ಎಂದು ಕೇಂದ್ರದ ವಿರುದ್ದ ಪರೋಕ್ಷವಾಗಿ ಮುಗಿಬಿಳುತ್ತಲೇ, ಮಾದ್ಯಮದವರಿಗೂ ತಿವಿಯುವ ಕೇಲಸ ಮಾಡಿದರು.

ಮಾದ್ಯಮ ವರ್ಗದಲ್ಲಿ ಬದುಕಿರುವ ಪತ್ರಕರ್ತರ ಬಗ್ಗೆ ಸ್ಥಳಿಯ ಶಾಸಕರು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಅವರ ಬೆನ್ನೆಲುಬಾಗಿರಬೇಕು, ಒಬ್ಬ ಪತ್ರಕರ್ತ ಸಂಪಾದಕ ಆಗಬೇಕು ಎಂದರೆ ಹಲವು ಕಷ್ಟಗಳನ್ನು ಎದುರಿಸಬೇಕು, ಮುಂದೆ ಅವನು ನಿಷ್ಪಕ್ಷಪಾತವಾಗಿ ಕೇಲಸ ಮಾಡಲು ಆಗದೇ, ಹಲವು ಸ್ಥಳಿಯ ನಾಯಕರ ಹಾಗೂ ಅಧಿಕಾರಿಗಳ ಟಿಕೆಗೆ ಗುರಿಯಾಗಿ ಕೇಲಸ ಮಾಡುವ ಅನಿವಾರ್ಯತೆ ಇರುತ್ತದೆ, ಹಿಗಾಗಿ ನಮ್ಮ ಸಂಘಟನೆಯ ಒಗ್ಗಟ್ಟನ್ನು ಬಲಪಡಿಸಿ ನಮಗೆ ಏನೇ ಸಮಸ್ಯೆ ಇದ್ದರೂ, ಹೊರಾಡೊಣ, ಮುಂದಿನ ದಿನಗಳಲ್ಲಿ ನೀರ, ದಿಟ್ಟ, ನಿರಂತರ, ನಿಷ್ಟುರರಾಗಿ ಸಮಾಜದ ಆಗುಹೊಗುಗಳನ್ನು, ಪತ್ರಿಕೆಯ ಮೂಲಕ ತಿಳಿಸುವ ಕೇಲಸವನ್ನು ಮಾಡೊಣ ಎಂದು ಬಾಗಲಕೋಟಿ ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷರಾದ ವಿಜಯ್ ಶಂಕರ್ ಅವರು ಹೆಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದವರು, ಬೆಟಗೇರಿ ಭಾಗದಲ್ಲಿ, ಪತ್ರಿಕಾ ಭವನ ನಿರ್ಮಿಸಲು ಒಂದು ನಿವೇಶನ ಮಂಜೂರು ಮಾಡಬೇಕೆಂದು ಸ್ಥಳಿಯ ಶಾಸಕರಾದ ಡಾ: ಎಚ್ ಕೆ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು, ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶಾಸಕರು ಮುಂದಿನ ದಿನಗಳಲ್ಲಿ ವಿಚಾರ ಮಾಡಿ ತಿಳಿಸುತ್ತೆನೆ ಎಂದು ಅಡ್ಡಗೊಡೆಯ ಮೇಲೆ ದೀಪ ಇಟ್ಟಂತೆ ಹೆಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿಗಳಾದ ವಸಂತ ಮಡ್ಲೂರ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷರು ಹಾಗೂ ಗದಗ ಸಂಜೆ ಪತ್ರಿಕೆಯ ಸಂಯಾದಕರಾದ ರಮೇಶ್ ಭಜಂತ್ರಿ, ಆರ್ ಕೆ ಗ್ರೂಪ್ ಹಾಗೂ ರತ್ಮಾಕರವಾಣಿ ದಿನಪತ್ರಿಕೆಯ ಸಂಪಾದಕರಾದ ಜಗದೀಶ್ ಎಸ್ ಪೂಜಾರ, ಸೂಪರವಾಣಿ ಪತ್ರಿಕೆಯ ಸಂಪಾದಕರಾದ ಮಹಾಂತೇಶ್ ಮಡ್ಲೂರ್, ವೇರಿ ಗುಡ್ ಮಾರ್ನಿಂಗ್ ಪತ್ರಿಕೆಯ ಸಂಪಾದಕರಾದ ದೇವಪ್ಪ ಲಿಂಗದಾಳ, ಸ್ಟಾರ್ ಆಪ್ ಗದಗ ಸಂಪಾದಕರಾದ ಕುಮಾರ್ ಕಟ್ಟಿಮನಿ, ವಿಜಯವಾಣಿ ಪತ್ರಿಕೆಯ ಪೊಟೊಗ್ರಾಪರ್ ಲಕ್ಷ್ಮಣ್ ವಗ್ಗಿ, ಪುಟ ವಿನ್ಯಾಸಕರಾದ ಈರಣ್ಣ ಮಾಳೆಕರ, ಗದಗ ಜಿಲ್ಲಾ ಆಟೊ ಚಾಲಕ ಮಾಲಕರ ಸಂಘದ ಅದ್ಯಕ್ಷರಾದ ವಿಜಯ್ ಕಲ್ಮನಿ, ಮಂಜುನಾಥ ಅಗಸಿಮನಿ ಹಾಗೂ ಜಿಲ್ಲೆಯ ಸಂಪಾದಕರು, ವರದಿಗಾರರು ಉಪಸ್ಥಿತರಿದ್ದರು.


Gadi Kannadiga

Leave a Reply