This is the title of the web page
This is the title of the web page

Please assign a menu to the primary menu location under menu

State

ಜೂ.೨೬ರಂದು ರಾಜ್ಯ ಸರ್ಕಾರಿ ಎಸ್‌ಸಿ , ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕಕ್ಕೆ ಚಾಲನೆ


ಹೊಸಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ
ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಒಳಾಂಗಣ
ಕ್ರೀಡಾಂಗಣದಲ್ಲಿ ಜೂ. ೨೬ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ
ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ
ಶುಕ್ರವಾರ ಮಾತನಾಡಿ, ಅಂದು ಬೆಳಿಗ್ಗೆ ೧೦.೩೦ಕ್ಕೆ ಪ್ರವಾಸೋದ್ಯಮ ಸಚಿವ
ಆನಂದ್ ಸಿಂಗ್ ಜಿಲ್ಲಾ ಘಟಕಕ್ಕೆ ಚಾಲನೆ ನೀಡಲಿದ್ದಾರೆ. ಸಾರಿಗೆ ಸಚಿವ ಬಿ.
ಶ್ರೀರಾಮುಲು ಅವರು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ
ಮಾಡಲಿದ್ದಾರೆ ಎಂದರು.
ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್, ಉಪಾಧ್ಯಕ್ಷ ಆರ್. ಮೋಹನ್ ಸೇರಿದಂತೆ
ಸಮಿತಿಯ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ
ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ೧೯೧ನೇರ‍್ಯಾಂಕ್ ಗಳಿಸಿದ ಅಪೂರ್ವ ಬಾಸೂರು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ
ಅಂಕ ಗಳಿಸಿದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು ಎಂದು
ಹೇಳಿದರು.
ಸAವಿಧಾನದ ಬಗ್ಗೆ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವುದು,
ಐಕ್ಯತೆ, ವೈಚಾರಿಕತೆಯ ಮಹತ್ವ ತಿಳಿಸುವುದು ಸಮಿತಿ ಮುಖ್ಯ
ಉದ್ದೇಶವಾಗಿದೆ. ಸಮಿತಿ ಅಸ್ತಿತ್ವಕ್ಕೆ ಬಂದ ನಂತರ ತಿಂಗಳಿಗೊಮ್ಮೆ
ಕಾರ್ಯಕ್ರಮ ಏರ್ಪಡಿಸಿ ಅರಿವು ಮೂಡಿಸಲಾಗುವುದು ಎಂದರು.
ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಜ್ಜಲ್ ಶಿವಕುಮಾರ್, ಉಪಾಧ್ಯಕ್ಷ ಟಿ.
ನಾಗೇಶ್, ಶ್ರೀಧರ್, ಭಾಸ್ಕರ್ ಎಸ್.ಆರ್., ವಿರೂಪಾಕ್ಷ ನಾಯಕ, ಆಂಜನೇಯಲು
ಇತರರಿದ್ದರು.


Gadi Kannadiga

Leave a Reply