ಬೆಳಗಾವಿ, ಏ.೨೫ : ಪ್ರತಿ ಮತವೂ ಅಮೂಲ್ಯವಾದ್ದು, ಮೇ ೧೦ ರಂದು ಎಲ್ಲರೂ ತಪ್ಪದೇ ತಮ್ಮ ಹಕ್ಕು ಚಲಾಯಿಸುವಂತೆ ತಾಲೂಕು ಪಂಚಾಯತಿ ಇ ಒ ನಿಂಗಪ್ಪ ಮಸಳಿ ಹೇಳಿದರು.
ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.
ಮತದಾನದ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನೈತಿಕ ಮತದಾನ ಮಾಡಬೇಕು. ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿ ಕೊಡಬೇಕು ಎಂದು ಕೂಲಿಕಾರರಿಗೆ ಸಲಹೆ ನೀಡಿದರು.ಸಹಾಯಕ ನಿರ್ದೇಶಕರಾದ ಗೋಪಾಳ ಮಾಳಿ ಅವರು ಮಾತನಾಡಿ ಸಂವಿಧಾನಾತ್ಮಕವಾಗಿ ದೊರೆತ ಮತದಾನದ ಹಕ್ಕನ್ನು ಚಲಾಯಿಸಿ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು. ಐಇಸಿ ಸಂಯೋಜಕ ಅಮೀತ ಇಂಗಳಗಾಂವಿ, ಗ್ರಾಮ ಪಂಚಾಯತಿ ಸಿಬ್ಬಂದಿ ಬೀರಪ್ಪಸಿಂಗಾಡೆ, ಮನರೇಗಾ ಕೂಲಿಕಾರರು ಉಪಸ್ಥಿತರಿದ್ದರು.
Gadi Kannadiga > Local News > ಮೇ ೧೦ ರಂದು ಎಲ್ಲರೂ ಹಕ್ಕು ಚಲಾಯಿಸಿ: ಇ ಒ ನಿಂಗಪ್ಪ ಮಸಳಿ
ಮೇ ೧೦ ರಂದು ಎಲ್ಲರೂ ಹಕ್ಕು ಚಲಾಯಿಸಿ: ಇ ಒ ನಿಂಗಪ್ಪ ಮಸಳಿ
Suresh25/04/2023
posted on
