ಗಂಗಾವತಿ: ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಕಂಪ್ಲಿ ತಡಸಾಲೆಪ್ಪನವರು ದಾನ ನೀಡಿರುವ ಭೂಮಿಯಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಆಗಸ್ಟ್-೨೩ ರಂದು ಬುಧವಾರ ಬೆಳಗ್ಗೆ ೯ ಗಂಟೆಗೆ ನೆರವೇರಲಿದ್ದು, ಕಾರ್ಯಕ್ರಮಕ್ಕೆ ಹಾಲುಮತ ಸಮಾಜದ ಗುರುಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದು, ಹಾಲುಮತ ಕುರುಬ ಸಮಾಜದ ಹಾಗೂ ಸರ್ವ ಸಮಾಜದವರು ಆಗಮಿಸುವಂತೆ ಶ್ರೀ ಬೀರಲಿಂಗೇಶ್ವರ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ. ನಾಗೇಶಪ್ಪ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಕೆ. ವೆಂಕಟೇಶ್ ಇವರು ಕೋರಿದ್ದಾರೆ.
ಅವರು ಬೀರಲಿಂಗೇಶ್ವರ ಸಮುದಾಯ ಭವನದ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿ ಹಲವು ದಶಕಗಳ ಹಾಲುಮತ ಕುರುಬ ಸಮಾಜದ ಕನಸಾಗಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಆಗಸ್ಟ್-೨೩ ಬುಧವಾರ ಬೆಳಗ್ಗೆ ೯ ಗಂಟೆಗೆ ನೆರವೇರಿಸಲಾಗುತ್ತಿದ್ದು, ಸಮಾಜದ ಗುರುಗಳಾದ ಸಿದ್ದಯ್ಯ, ಸಿದ್ದರಾಮಯ್ಯ ಗುರುವಿನ ನೇತೃತ್ವದಲ್ಲಿ ನೆರವೇರಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ, ಕೆ. ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಮಾಜಿ ಸಂಸದರಾದ ಕೆ ವಿರುಪಾಕ್ಷಪ್ಪ, ಹೆಚ್.ಜಿ. ರಾಮುಲು ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್.ಆರ್ ಶ್ರೀನಾಥ್, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಎಂ ಮಲ್ಲಿಕಾರ್ಜುನ್ ನಾಗಪ್ಪ, ಸಾಲೋಣಿ ನಾಗಪ್ಪ, ಆನೆಗುಂದಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಕನಕದಾಸ ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿಠಲಾಪುರ ಯಮನಪ್ಪ ಸೇರಿ ಅನೇಕ ಸಮಾಜಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಕಾರಣ ಗಂಗಾವತಿ ತಾಲೂಕು ಹಾಲುಮತ ಕುರುಬ ಸಮಾಜದ ಸರ್ವ ಸಮಾಜ ಬಾಂಧವರು ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳುವ ಮೂಲಕ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎನ್. ಯಮನೂರಪ್ಪ, ಎನ್. ಶರಣಪ್ಪ, ಶಿವಬಸವನಗೌಡ, ಚಂದ್ರಶೇಖರ್ ನಂದಿಹಳ್ಳಿ, ನಿಂಗಪ್ಪ ತಡಸಾಲೆಪ್ಪ ಸೇರಿದಂತೆ ಅನೇಕರಿದ್ದರು.
Gadi Kannadiga > State > ಆ.೨೩ ರಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಶಂಕುಸ್ಥಾಪನೆ
ಆ.೨೩ ರಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಶಂಕುಸ್ಥಾಪನೆ
Suresh21/08/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023