ಯಮಕನಮರಡಿ: ಪಂಚಮಸಾಲಿ ಲಿಂಗಾಯತರು ಮೂಲತಃ ರೈತರಾಗಿದ್ದು ಸಂಪೂರ್ಣವಾಗಿ ನಿಸರ್ಗವನ್ನೇ ಅವಲಂಬಿಸಿದ್ದಾರೆ ಅತೀವೃಷ್ಟ ಮತ್ತು ಅನಾವೃಷ್ಟಿ ಹೊಡೆತದಿಂದ ಪಂಚಮಸಾಲಿಗಳ ಕೃಷಿ ಬದುಕು ಸಂಪೂರ್ಣವಾಗಿ ಶೋಚನೀಯವಾಗಿದೆ ಈ ಹಿನ್ನಲೆಯಲ್ಲಿ ಅಕ್ಟೋಬರ ೨೧ ರಂದು ಧರ್ಮಕ್ಷೇತ್ರ ಕೂಡಲಸಂಗಮ ಮಹಾಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಅವರ ನೇತ್ರತ್ವದಲ್ಲಿ ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿಯ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಪಂಚಮಸಾಲಿ ಯಮಕನಮರಡಿ ಘಟಕದ ಕಾರ್ಯಾಧ್ಯಕ್ಷ ರವೀಂದ್ರ ಜಿಂಡ್ರಾಳಿ ಹೇಳಿದರು.
ಅವರು ಬುಧವಾರ ದಿ. ೧೯ ರಂದು ಯಮಕನಮರಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ವಿಷಯ ಹೇಳಿದರು ಮಕ್ಕಳ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ೨ಎ ಮೀಸಲಾತಿ ಪಡೆಯಲು ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದು ಇಲ್ಲಿಯವರೆಗೆ ಸರ್ಕಾರ ಸ್ಪಂದಿಸಿಲ್ಲ ಈ ಹೋರಾಟದಲ್ಲಿ ಎಲ್ಲ ಪಂಚಮಸಾಲಿ ಮುಖಂಡರ ಪಕ್ಷಾತೀತವಾಗಿ ಭಾಗವಹಿಸುತ್ತಿದ್ದಾರೆ ಈಗಾಗಲೇ ಪ್ರತಿಯೊಂದು ಗ್ರಾಮಗಳಿಗೆ ಹೋಗಿ ೨ಎ ಮೀಸಲಾತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಅಂದು ನಡೆಯಲಿರುವ ಸಮಾವೇಶದಲ್ಲಿ ಮಾಜಿ ಸಚಿವರುಗಳಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮತ್ತು ಶಾಸಕರಾದ ಬಸನಗೌಡ ಯತ್ನಾಳ, ಗಣೇಶ ಹುಕ್ಕೇರಿ, ಲಕ್ಷ್ಮೀಹೆಬ್ಬಾಳಕರ ಮತ್ತು ವಿನಯ ಕುಲಕರ್ಣಿ, ಹಲವಾರು ಮುಖಂಡರು ಪಾಲ್ಗೊಳ್ಳಿದ್ದಾರೆ.
ಹುಕ್ಕೇರಿ ಶ್ರೀ ಅಡವಿಸಿದ್ದೇಶ್ವರ ಮಠದಿಂದ ಕುಂಭಮೇಳದೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ ಆದ್ದರಿಂದ ಪಂಚಮಸಾಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಗೆಯಲ್ಲಿ ಭಾಗವಹಿಸಬೇಕೆಂದು ರವೀಂದ್ರ ಜಿಂಡ್ರಾಳಿ ಹೇಳಿದರು.
ಪಂಚಮಸಾಲಿ ಮುಖಂಡರಾದ ವೀರಣ್ಣಾ ಬಿಸಿರೊಡ್ಡಿ ಮಾತನಾಡಿ ಹುಕ್ಕೇರಿಯಲ್ಲಿ ನಡೆಯಲಿರುವ ಲಿಂಗಾಯತ ಪಂಚಮಸಾಲಿಯ ಬೃಹತ್ ಸಮಾವೇಶದಲ್ಲಿ ೧ ಲಕ್ಷಕ್ಕೀಂತ ಹೆಚ್ಚು ಜನರು ಪಾಲ್ಗೊಳ್ಳುವ ನೀರೀಕ್ಷೆಯಿದೆ. ಈ ಸಮಾವೇಶವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಎಚ್ಚರಿಕೆಯ ಘಂಟೆಯಾಗಲಿದೆ ಒಂದು ವೇಳೆ ಸರ್ಕಾರವು ನಮ್ಮ ಹೋರಾಟಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಈ ಹೋರಾಟವನ್ನು ತೀವೃಗೊಳಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈರಣ್ಣಾ ಕುಡಚಿ, ಪ್ರಕಾಶ ಬಿಸಿರೊಟ್ಟಿ, ಮಾರುತಿ ತೇರಣಿ, ಪ್ರಕಾಶ ನಗಾರಿ, ಸಿದ್ದು ಕುಡಚಿ, ಬಸವರಾಜ ಪಟ್ಟಣಶೆಟ್ಟಿ, ಸಂತೋಷ ಕುಡಚಿ, ರವಿ ಮಲ್ಲಾಪೂರಮಠ, ಕೆಂಪಯ್ಯಾ ಮಠಪತಿ, ಹುಕ್ಕೇರಿ ಮಾಜಿ ತಾ.ಪಂ.ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ದಿ. ೨೧ ರಂದು ಹುಕ್ಕೇರಿಯಲ್ಲಿ ಪಂಚಮಶಾಲಿ ಬೃಹತ್ ಸಮಾವೇಶ : ರವೀಂದ್ರ ಜಿಂಡ್ರಾಳಿ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023