22 ರಂದು ವಚನದರ್ಶನ ಮಿಥ್ಯ VS ಸತ್ಯ ಗ್ರಂಥ ಬಿಡುಗಡೆ

Murugesh Shivapuji
22 ರಂದು ವಚನದರ್ಶನ ಮಿಥ್ಯ VS ಸತ್ಯ ಗ್ರಂಥ ಬಿಡುಗಡೆ
WhatsApp Group Join Now

ಬೆಳಗಾವಿ ; ಮಂಗಳವಾರ ದಿನಾಂಕ 22 ರಂದು ಬೆಳಗಿನ 10:30 ಗಂಟೆಗೆ ವಚನದರ್ಶನ ಮಿಥ್ಯ VS ಸತ್ಯ ಗ್ರಂಥದ ಬಿಡುಗಡೆ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿರುವ ಎಸ್ ಜಿ ಬಿ ಐ ಟಿ ಕಾಲೇಜಿನ ಸಭಾಗ್ರಹದಲ್ಲಿ ನಡೆಯಲಿದೆ.
ಗದುಗಿನ ಯಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿಯವರ ಸಾನಿಧ್ಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರು ನೇತೃತ್ವ ವಹಿಸಲಿದ್ದಾರೆ. ಸಮ್ಮುಖದಲ್ಲಿ ಹಂದಿಗುಂದ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಜಗತಿಕ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ವಹಿಸದ್ದಾರೆ. ನಿವೃತ್ತ ಪ್ರಾಧ್ಯಾಪಕ ಹುಬ್ಬಳ್ಳಿಯ ಪ್ರೊ. ಕೆ.ಎಸ್.ಕೌಜಲಗಿ ಗ್ರಂಥ ಪರಿಚಯ ಮಾಡಲಿದ್ದು. ವಚನ ಟಿವಿ ಯ ಪ್ರಧಾನ ಸಂಪಾದಕ ಸಿದ್ದು ಯಾಪಲಪರವಿ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ, ಲಿಂಗಾಯತ ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ದೇಯಣ್ಣವರ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಜಾಗತೀಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಕಾರ್ಯದರ್ಶಿ ಅಶೋಕ ಮಳಗಲಿ ಸ್ವಾಗತಿಸಲಿದ್ದು ಲಿಂಗಾಯಿತ ಮಹಾಸಭೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ. ಪ್ರೇಮಾ ಅಂಗಡಿ ವಂದಿಸಲಿದ್ದಾರೆ, ಎಸ್ ಜಿ ಬಿ ಐ ಟಿ ಕಾಲೇಜಿನ ಪ್ರೊ. ಮಂಜುನಾಥ ಶರಣಪ್ಪನವರ ಕಾರ್ಯಕ್ರಮ ನಿರ್ವಹಿಸಲಿದ್ದು, ಶ್ರೀಮತಿ. ನೈನಾ ಗಿರಿಗೌಡರ ವಚನ ಪ್ರಾರ್ಥನೆ ಸಲ್ಲಿಸಲಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!