ಒಂದ ಕಪ್ಪು ಚಹಾ..

Murugesh Shivapuji
ಒಂದ ಕಪ್ಪು ಚಹಾ..
WhatsApp Group Join Now

ದಣಿದ ದೇಹಕ್ಕೆ ಮತ್ತು ದಣಿದ ಮನಸ್ಸಿಗೆ ಒಂದು ಕಪ್ ಚಹಾ ಸಿಕ್ಕಿಬಿಟ್ರೆ ಸ್ವರ್ಗಾನಂದ ಹೌದಲ್ಲೋ.
ಬಹಳ ಜೋರ ಮಳೆ ಆಗ್ತಿರ್ತದೆ, ಅದರ ಜೋಡಿ ಥಂಡಿನೂ ಇರತದ ಅಂಥಾ ಸಂದರ್ಭದೊಳಗ ಒಂದು ಕಪ್ಪು ಚಹಾ ಸಿಕ್ಕಿ ಬಿಟ್ಟರೆ ಬ್ರಹ್ಮಾನಂದ ಹೌದಲ್ಲಾ? ಹಸಿದ ಹೊಟ್ಟೆಗೆ ಚಹಾ ಕುಡಿಬಾರದು ಆದರೂ ಊಟ ಸಿಗದೇ ಇರುವಂತಹ ಸಂದರ್ಭದೊಳಗ ಒಂದು ಚಕ್ಕ ಚಹಾ ಸಿಕ್ಕಿಬಿಟ್ಟರೆ ಒಂದೆರಡು ತಾಸ್ ಆದ್ರು ನಿಮಗೆ ತೊಂದರೆ ಆಗದಂಗ ನೋಡ್ಕೋತದ ಹೌದಲ್ಲೋ ?
ಇದನ್ನೆಲ್ಲ ಯಾಕ್ ಹೇಳಾಕತ್ತೀನಿ ಅಂತ ಅಂದ್ರ ಇಲ್ಲಿ ಒಬ್ಬ ಚಹಾದ್ ಕೃಷ್ಣಾ ಅಂತ ಅದಾನ ಅವನ ಕಾಯಕ ಏನಪ್ಪಾ ಅಂದ್ರೆ ಬೆಳಗಾವಿ ಹನುಮಾನನಗರ್, ಕುವೆಂಪು ನಗರ, ಸಹ್ಯಾದ್ರಿ ನಗರ , ಮಹಾಬಲೇಶ್ವರ ನಗರ , ವಿಜಯನಗರ, ವಿನಾಯಕ ನಗರ ಹಿಂಗ್ ಬಾ…ಳ ನಗರಗಳು ಹೊಸ ಹೊಸ ಬಡಾವಣೆಗಳು ಅದಾವ ಇಲ್ಲೆಲ್ಲಾ  ತನ್ನ ದ್ವಿಚಕ್ರ ವಾಹನದ ಮೇಲೆ 55 ರ ಹರೆಯದ ಕೃಷ್ಣಾ ದಿನಕ್ಕೆ ಕನಿಷ್ಠ 60 km ಓಡಾಡಿ ಅವರಿದ್ದಲ್ಲೇ ಹೋಗಿ ಅವರಿಗೆ ಚಹಾ ಮತ್ತ ಕಾಫಿ ಕೊಡುವಂಥಾ ಕಾಯಕ ಈ ಕೃಷ್ಣಾ ಮಾಡುತಾನೆ.
ಮಹಾರಾಷ್ಟ್ರ ಮುಂಗರವಾಡಿಯ ಕೃಷ್ಣ ಪಾಟೀಲ್ ಸದ್ಯಕ್ಕೆ ವಾಸ ಮಾಡುವುದು ಬೆಳಗಾವಿಯ ಜಯನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳು ಒಬ್ಬಳು ಎನ್ ಡಿ ಟಿವಿಯಲ್ಲಿ ಮತ್ತೊಬ್ಬಳು ಇನ್ನೊಂದು ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಇತ್ತೀಚೆಗೆ ಸಾಫ್ಟ್ವೇರ್ ಇಂಜಿನಿಯರ್ ಒಟ್ಟಿಗೆ ಹಿರಿ ಮಗಳ ಮದುವೆ ಆಗಿದೆ ಮದುವೆಗೆ ಹೋಗಲಾಗದ ಒಂದು ಕಪ್ ಚಹಾದ ಕೆಲವು ಖಾಯಂ ಗಿರಾಕಿಗಳು ಆತನಿಗೆ ಶುಭ ಹಾರೈಸಿ ಆತ್ಮೀಯತೆಯಿಂದ ಕಾಣಿಕೆ ನೀಡಿದ ಸಂದರ್ಭ ಇಲ್ಲಿ ನೆನಪಿಸಿಕೊಳ್ಳಲಾಯಿತುಈತ ಸದ್ಯಕ್ಕೆ ಇಲ್ಲಿ ಒಬ್ಬಂಟಿ ದಿನಕ್ಕೆ ಎರಡು ನೂರರಿಂದ ನಾಲ್ಕು ನೂರು ಕಪ್ ಚಹಾ ಮಾರುವ ಈತನಿಗೆ ಉಳಿಯುವುದು ಪ್ರತಿ ಕಪ್ಪಿಗೆ ಒಂದೂವರೆಯಿಂದ ಎರಡು ರೂಪಾಯಿಗಳು ಮಾತ್ರ.
ಐದು ರೂಪಾಯಿಗೆ ಒಂದು ಕಪ್ಪು ಚಹಾ, ಅದು ವಿತ್ ಶುಗರ್ ಆಗಿರಬಹುದು ವಿಥೌಟ್ ಶುಗರ್ ಆಗಿರಬಹುದು. ಅದು ಕಾಫಿ ಆಗಿರಬಹುದು ಚಹಾ ಆಗಿರಬಹುದು ಬೇಕಂದ್ರೆ ಅದರ ಜೋಡಿ ಬಿಸ್ಕಿಟ್ ಇರ್ತಾವ. ಬೆಳಗಿನ ವಾಕಿಂಗ್ ಮಾಡುವಂಥ ಸೀನಿಯರ್ ಸಿಟಿಜನ್ಸ್ ಇರಬಹುದು ಜೂನಿಯರ್ ಸಿಟಿಜನ್ಸ್ ಇರಬಹುದು ಬೇಕಾದವರು ಚಹಾ ಕುಡೀತಾರ, ಕೆಲವರಂತೂ ಕೃಷ್ಣಾನ ಹಾದಿ ನೋಡ್ಕೊಂತ ನಿಲ್ತಾರ ಅವನಿಗೂ ಗೊತ್ತಿರುತ್ತದೆ ಇವರು ಹಾದಿ ಕಾಯ್ತಾ ಇದ್ದಾರೆ ಅಂತ. ರಸ್ತೆ ಕಾಮಗಾರಿ ಕೆಲಸ ಮಾಡುವವರಾಗಿರಬಹುದು, ಬೆಳಗಿನ ರಸ್ತೆ ಸ್ವಚ್ಛತಾ ಮಾಡು ಕಾರ್ಪೊರೇಷನ್ ದವರಾಗಿರಬಹುದು, ಕಟ್ಟಡ ಕಾಮಗಾರಿಗಳಿಗೆ ಬರುವಂತಹ ಕಾರ್ಮಿಕರಾಗಿರಬಹುದು ಇದೇ ರೂಟದಾಗ ಓಡಾಡುವಂತ ಗಾಡಿ ಡ್ರೈವರ್ ಗಳಾಗಿರಬಹುದು ಎಲ್ಲರಿಗೂ ಕೃಷ್ಣಾ ಬೇಕು. ಇಡೀ ದಿವಸ ಯಾರು ಎಲ್ಲಿರ್ತಾರೋ ಅಲ್ಲಿ ಹೋಗಿ ಚಹಾ ಕುಡಿಸೋದು ಅವನ ಕಾಯಕ. ಕೆಲವರು ತಮ್ಮ ಮನೆಗಳಿಗೆ ಇರುವಂತ ಕೆಲವು ಕಾರ್ಯಕ್ರಮಗಳಿಗೂ ಹೇಳಿ ಬಿಟ್ಟಿರುತ್ತಾರೆ 20–30 ಚಹಾ ತರಿಸ್ಕೊಂತಾರ ನಾನು ಅಷ್ಟೇ ಬಹಳ ಸಾರಿ ತರಿಸಿಕೊಂಡಿದ್ದೇನೆ. ರಸ್ತೆ ಬದಿಯ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಬಂಗಲೆಗಳವರಿಗೂ ಚಹಾ ಕೊಟ್ಟಿದ್ದೇನೆ ಎಂದು ಹೇಳುವಾಗ ಅವನಿಗೊಂದು ಖುಷಿ. ಪ್ರಾಮಾಣಿಕ ಕಾಯಕಯೋಗಿಗೆ ಒಂದು ಸೆಲ್ಯೂಟ್.

WhatsApp Group Join Now
Telegram Group Join Now
Share This Article
error: Content is protected !!