ಬೆಳಗಾವಿ:- ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಲ್ಲಿ ದಿನಾಂಕ: ೧೨.೦೪.೨೦೨೩ ರಂದು ಸಕ್ಕರೆ ಕಾರ್ಖಾನೆಯ “ಮಿಲ್ ಸೆಟಿಂಗ್, ಮಿಲ್ ಕಾರ್ಯನಿರ್ವಹಣೆ ಮತ್ತು ಕಬ್ಬಿನ ಸಿಪ್ಪೆ (ಬಗಾಸ್) ನಲ್ಲಿ ತೇವಾಂಶ ನಿಯಂತ್ರಿಸುವ ಕ್ರಮಗಳ” ಕುರಿತು ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷರಾದ ಪ್ರೊ. ಎ. ಆರ್. ತಾರದಾಳೆ, ಸಂಯೋಜಕರು, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಕ್ಕರೆ ಕಾರ್ಖಾನೆಯಲ್ಲಿ ಮಿಲ್ ವಿಭಾಗ ಬಹುಮುಖ್ಯ ಅಂಗವಾಗಿದ್ದು ಅದರ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಕೈಶಲ್ಯಯುತ ಅಭಿಯಂತರರ ಪಾತ್ರ ಪ್ರಮುಖವಾದದು, ಈ ನಿಟ್ಟಿನಲ್ಲಿ ಸದರಿ ತರಬೇತಿ ಕಾರ್ಯಾಗಾರವು ಪಾಲ್ಗೊಂಡ ಎಲ್ಲ ಅಭಿಯಂತರರಿಗೆ ಉತ್ತಮ ಮಾಹಿತಿ ನೀಡಲಿದೆ ಎಂದರು. ಜೊತೆಗೆ ಸಂಸ್ಥೆಯಲ್ಲಿ ಜರುಗುವ ವಿವಿಧ ವಿಚಾರ ಸಂಕಿರಣ, ತರಬೇತಿ ಕಾರ್ಯಕ್ರಮಗಳು ಹಾಗೂ ಪದವಿ ಕೋರ್ಸಗಳು, ಸಕ್ಕರೆ ಕಾರ್ಖಾನೆಗಳ ಕಾರ್ಯಕ್ಷಮತೆ, ದಕ್ಷತೆ ಅಭಿವೃದ್ಧಿ ಪಡಿಸುವಲ್ಲಿ ಅವಶ್ಯವಿರುವ ಕೈಶಲ್ಯಯುತ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿಸಿದರು.
ಸದರಿ ತರಬೇತಿ ಕಾರ್ಯಾಗಾರದಲ್ಲಿ ಹಿರಿಯ ತಂತ್ರಜ್ಞರಾದ ಶ್ರೀ. ಕೆ. ಬಿ. ಕಾಳೆ ಇವರು ಕಾರ್ಖಾನೆಯ ಮಿಲ್‌ಗಳಲ್ಲಿ ಸಂಪೂರ್ಣವಾಗಿ ಕಬ್ಬಿನ ರಸ ಬೆರ್ಪಡಿಸಲು ಬೇಕಾದ ಕಬ್ಬಿನ ಪೂರ್ವತಯಾರಿ, ಮಿಲ್‌ಗಳ ಕಾರ್ಯದಕ್ಷತೆ ಹೆಚ್ಚಿಸಲು ಮಾಡಬೇಕಾಗಿರುವ ಮಾರ್ಪಾಡುಗಳು, ಉತ್ತಮ ಕಾರ್ಯನಿರ್ವಹಣೆಗಾಗಿ ಅಳವಡಿಸಿಕೊಳ್ಳಬೇಕಾಗುವ ಹೊಸ ತಂತ್ರಜ್ಞಾನದ ಕುರಿತು ವಿವಿರವಾಗಿ ವಿವರವಾಗಿ ಉಪನ್ಯಾಸ ನೀಡಿದರು.
ನಂತರ ಉಪನ್ಯಾಸ ನೀಡಿದ ಡಾ|| ಎಂ. ಬಿ. ಲೊಂಡೆ, ಇವರು ಕಾರ್ಖಾನೆಗಳಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಸರಿಯಾದ ಇಂಬಿಬಿಶನ್ ನೀರಿನ ಪ್ರಮಾಣ, ಅದರ ಪ್ರಯೋಜನೆ ಹಾಗೂ ಕಬ್ಬಿನ ಸಿಪ್ಪಿಯಲ್ಲಿ ಆಗುತ್ತಿರುವ ಸಕ್ಕರೆ ನಷ್ಟವನ್ನು ನಿಯಂತ್ರಿಸುವ ವಿಧಾನಗಳು, ಅದರಿಂದ ಹೆಚ್ಚಿಸಬಹುದಾದ ಸಕ್ಕರೆ ಇಳುವರಿಯ ಕುರಿತು ವಿವಿರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಕಾರ್ಖಾನೆಗಳಿಂದ ಸುಮಾರು ೧೦೦ ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದರು.
Gadi Kannadiga > Local News > ಒಂದು ದಿನದ ತರಬೇತಿ ಕಾರ್ಯಾಗಾರ
ಒಂದು ದಿನದ ತರಬೇತಿ ಕಾರ್ಯಾಗಾರ
Suresh12/04/2023
posted on
