This is the title of the web page
This is the title of the web page

Please assign a menu to the primary menu location under menu

State

ಮೂಲಭೂತ ಸಮಸ್ಯೆಗಳಲ್ಲಿ ಜನಸಂಖ್ಯೆ ಒಂದು ಕಾರಣ : ಪಟ್ಟಣದಲ್ಲಿ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಹೇಳಿಕೆ


ಕೊಪ್ಪಳ:-ಜಿಲ್ಲೆಯ ಕುಷ್ಟಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಗುರುವಾರ ತಾಲೂಕು ಆರೋಗ್ಯ ಇಲಾಖೆ, ಐಕ್ಯೂಎಸಿ ಹಾಗೂ ಎನ್.ಎಸ್.ಎಸ್. ಯೋಜನೆಯಡಿ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ನಮ್ಮ ದೇಶದಲ್ಲಿ ಜನಸಂಖ್ಯೆ ನಿಭಾಯಿಸುತ್ತಿರುವುದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರಿ ಮಾತನಾಡಿ, ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಸಧ್ಯ 138 ಕೋಟಿ ಜನಸಂಖ್ಯೆ ಹೊಂದಿದ್ದು, ಇದೇ ಗತಿಯಲ್ಲಿ ಮುಂದುವರೆದರೆ ಚೀನಾ ದೇಶವನ್ನು ಮೀರಿಸಿ ಭಾರತ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಲಿದೆ. ಹಾಗಾಗಿ ಕಾನೂನು ನಿಗದಿಪಡಿಸಿದ ವಯೋಮಾನದಲ್ಲಿ ಮಕ್ಕಳಿಗೆ ಮದುವೆ ಮಾಡಿಸಿ ಜನಸಂಖ್ಯಾ ನಿಯಂತ್ರಣಕ್ಕೆ ನಾಗರಿಕರು ಮುಂದಾಗಬೇಕು ಎಂದರು.

ತಾಲೂಕು ಆರೋಗ್ಯ ಇಲಾಖೆ ಸಮಾಲೋಚಕ ಪ್ರಕಾಶ ಗುತ್ತೇದಾರ ಅವರು, ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ ತಡೆಗಟ್ಟುವ ಮತ್ತು ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು.

ಪ್ರಾಚಾರ್ಯ ಡಾ.ಎಸ್.ವಿ ಡಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್ ಮೇಟಿ, ಕನ್ನಡ ಉಪನ್ಯಾಸಕರಾದ ರವಿ ಹಾದಿಮನಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ.ಕೆ., ಮಹಾಂತೇಶ ಗವಾರಿ, ಶಿವರಾಜ್ ಬಂಡಿಹಾಳ್ ಸೇರಿ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Gadi Kannadiga

Leave a Reply