This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಆನ್ಲೈನ್ ಬೆಳಗಾವಿ ಕಾವ್ಯ ಸಮ್ಮೇಳನ


ಬೆಳಗಾವಿ ಇಂಟರ್ನ್ಯಾಷನಲ್ ಪೊಯೆಟ್ರಿ ಪೆಸ್ಟಿವಲ್ ಆನ್ಲೈನ್ ಸ್ಪರ್ಧೆ ಮೂಲಕ ಕವನ ರಚನೆಗಾರರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಲಾಗುತ್ತಿದ್ದು ಆಸಕ್ತರು ಆನ್ಲೈನ್ ಮೂಲಕ ಸ್ಪರ್ಧಿಸಿ ಕಲೆ ಪ್ರದರ್ಶನ ಮಾಡಲು ಒಳ್ಳೆಯ ಅವಕಾಶವಿದೆ ಎಂದು ಭರತೇಶ್ ಶಿಕ್ಷಣ ಸಂಸ್ಥೆ ಚೇರಮನ್ ವಿನೋದ ದೊಡ್ಡನ್ನವರ ಹೇಳಿದರು.

ನಗರದ ಭರತೇಶ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗುಬ್ಬಿಬೂ ರವರ ರೋಸ್ಟ್ರಮ ಡೈರೀಸ್ ಸಾರಥ್ಯದಲ್ಲಿ ಎರಡನೇ ಬಾರಿಗೆ ಬೆಳಗಾವಿ ಕಾವ್ಯ ಸಮ್ಮೇಳನವನ್ನು ಆನಲೈನ್ ಮೂಲಕ ಹಮ್ಮಿಕೊಳ್ಳಲಾಗಿದ್ದು ಆಸಕ್ತ ಕಾವ್ಯ ರಚನೆಗಾರರು ಭಾಗವಹಿ. ಇಂಗ್ಲೀಷ್, ಹಿಂದಿ, ಕನ್ನಡ, ಮರಾಠಿ ನಾಲ್ಕೂ ಭಾಷೆಗಳಲ್ಲಿ ವಯಸ್ಸಿನ ಮಿತಿ ಇಲ್ಲದೆ ಆಸಕ್ತರು ಕವನವನ್ನು ಕಳಿಸಬಹುದಾಗಿದ್ದು ಆಯ್ಕೆಗೊಂಡ 200 ಕವನಗಳನ್ನು ಉಚಿತವಾಗಿ ಬೆಳಗಾವಿ ಕವನ ಸಮ್ಮೇಳನ 2022 ಕವನ ಸಂಕಲನದಲ್ಲಿ ಪ್ರಕಟಿಸಲಾಗುತ್ತದೆ ಎಂದರು.

ಕವನ ಸಲ್ಲಿಕೆ ನೋಂದಣಿ ಮಾಡಿಕೊಳ್ಳಲು 150ರೂ ಇದ್ದು ಮೇ.22 ಕವನ ಸಲ್ಲಿಕೆಯ ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ 9986186781 ಗೇ ಸಂಪರ್ಕಿಸಿ ಎಂದರು.

ಈ ವೇಳೆ ಅಭಿಶೇಕ ಬೆಂಡಿಗೇರಿ, ಅಶಿತೇಶ್ ಡೇವಿಡ್, ಸ್ವಾತಿ ಜೋಗ್, ಸುಮೀತ್ ಆರ್ಯ, ಕೋಮಲ್ ಚೌಗಲೆ ಸೇರಿದಂತೆ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು


Leave a Reply