ಗಡಿ ಕನ್ನಡಿಗ
.
ಖಾನಾಪುರ: ಭೂ ಕಂದಾಯ ದಾಖಲೆಗಳು ಮತ್ತು ಇನ್ನಿತರ ವಿವಿಧ ದಾಖಲೆಗಳು ಆನಲೈನಲ್ಲಿ ಪಡೆಯಬೆಕು ಎಂದು ರಾಜ್ಯ ಸರ್ಕಾರದ ಆದೇಶ ಮಾಡಿದೆ ಆದರೆ ಇದು ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಆದ್ದರಿಂದ ರೈತರು ಸಾರ್ವಜನಿಕರು ಕಚೇರಿ ಅಲೆದಾಟ ತಪ್ಪುತ್ತಿಲ್ಲ ಎಂದು ನೇಗಿಲಯೋಗಿ ರೈತ ಸಂಘದ ಜಿಲ್ಲಾದ್ಯಕ್ಷ ರುದ್ರಗೌಡ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ರೈತರ ಹಾಗೂ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸುವದರ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಯನ್ನ ನಾವು ಶ್ಲಾಘಿಸುತ್ತೇವೆ ಆದರೆ ದಾಖಲಾತಿಗಳು ಸಂಪೂರ್ಣ ಗಣಕೀಕೃತ ಆಗದೆ ರೈತರು ಗೊಂದಲಕ್ಕೀಡಾಗುತ್ತಿದ್ದು ಅಧಿಕಾರಿಗಳು ಸಮರ್ಪಕವಾಗಿ ಸಪಂದಿಸದೇ ಇರುವದರಿಂದ ರೈತರ ಕಚೇರಿ ಅಲೆದಾಟ ತಪ್ಪುತ್ತಿಲ್ಲ.
ಆದ್ದರಿಂದ ದಾಖಲೆಗಳು ಸಂಪೂರ್ಣ ಗಣಕೀಕೃತ ಆಗುವ ಮೊದಲೆ ಇದಕ್ಕೆ ಚಾಲನೆ ನೀಡಿದ್ದು ಸರಕಾರದ ಅವಸರದ ನಿರ್ದಾರ ಎನಿಸುತ್ತಿದೆ ಏಕೆಂದರೆ ರೈತರು ತಮಗೆ ಬೇಕಾದ ದಾಖಲಾತಿಗಳನ್ನ ಹುಡುಕಲು ಸಾಧ್ಯವಾಗುತ್ತಿಲ್ಲ ಇದನ್ನೇ ಬಂಡವಾಳವಾಗಿಟ್ಡುಕೊಂಡ ಕೆಲ ಸೈಬರ್ ಅಂಗಡಿಯವರು ರೈತರನ್ನ ಲೂಟಿ ಹೊಡೆಯುವ ಕೆಲಸಕ್ಕೆ ಮುಂದಾಗಿರುವದು ವಿಷಾಧನೀಯ ಆದ್ದರಿಂದ ಆದಷ್ಟು ಬೇಗ ರೈತರ ಎಲ್ಲ ದಾಖಲೆಗಳು ಆನ್ಲೈನ್ ನಲ್ಲಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.