This is the title of the web page
This is the title of the web page

Please assign a menu to the primary menu location under menu

Local News

ಕ್ರೀಡಾ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ


ಬೆಳಗಾವಿ,ಜೂನ್ ೭ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು ( ೬ ರಿಂದ ೧೦ನೇ ತರಗತಿ) ಗಳಿಗೆ ವಾರ್ಷಿಕ ೧೦,೦೦೦ ರೂಪಾಯಿಗಳ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕ್ರೀಡಾಪಟುಗಳು ೨೦೨೧-೨೨ ನೇ ಸಾಲಿನ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ/ಪ್ರೌಢಶಾಲೆ ( ೬ ರಿಂದ ೧೦ನೇ ತರಗತಿ) ಯಲ್ಲಿ ಓದುತ್ತಿರಬೇಕು. ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು ಏಪ್ರಿಲ್ ೧, ೨೦೨೧ ರಿಂದ ಮಾರ್ಚ್ ೩೧, ೨೦೨೨ ರವರೆಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಒಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು.
ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿನಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟು ಅರ್ಜಿ ಸಲ್ಲಿಸಬಹುದು. ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ವಿದ್ಯಾರ್ಥಿ ವೇತನದ ಮೋತ್ತಕ್ಕೆ ಅರ್ಹರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಅರ್ಹ ಕ್ರೀಡಾಪಟುಗಳು ಕಚೇರಿಯ ಅಧಿಕೃತ ಜಾಲತಾಣ hಣಣಠಿ://seಡಿviಛಿeoಟಿಟiಟಿe.gov.iಟಿ/ಏಚಿಡಿಟಿಚಿಣಚಿಞಚಿ ಮೂಲಕ ಆನ್ ಲೈನ್ ನಲ್ಲಿ ಜೂನ್ ೩೦ ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply