ಗದಗ ಮೇ ೧೧: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಮನ್ ಸಂಶೋಧನಾ ಸಂಸ್ಥೆಯ ಎಪ್ಪತ್ತೆöÊದನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ಪರಿಸರ ಸಂಘದ ಇಪ್ಪತ್ತೆöÊದನೇ ವಾರ್ಷಿಕೋತ್ಸವದ ಅಂಗವಾಗಿ ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ನಗರ ನಿರ್ವಹಣೆ ಮತ್ತು ನೀರಿನ ಸಂರಕ್ಷಣೆ ( Uಡಿbಚಿಟಿ ಒಚಿಟಿಚಿgemeಟಿಣ ಚಿಟಿಜ Wಚಿಣeಡಿ ಅoಟಿseಡಿvಚಿಣioಟಿ ) ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗುತ್ತಿದೆ.
ಈ ಕಾರ್ಯಾಗಾರದಲ್ಲಿ ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ನಗರಗಳು ವಿಷಯದ ಮೇಲೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಬಂಧಗಳನ್ನು ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು ಬರೆದು ಕಳುಹಿಸಲು ಜೂನ್ ೦೧ ದಿನವಾಗಿದೆ.
ಪ್ರಬಂಧ ಕಳುಹಿಸಲು ನಿಯಮಗಳು : ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಒಬ್ಬರು ಒಂದು ಭಾಷೆಯಲ್ಲಿ ಪ್ರಬಂಧವನ್ನು ಬರೆಯಲು ಅವಕಾಶವಿರುತ್ತದೆ. ಒಂದು ವೇಳೆ ಎರಡು ಭಾಷೆಗಳಲ್ಲಿ ಬರೆದರೆ , ಒಂದನ್ನು ನಮ್ಮ ವಿವೇಚನೆಯಂತೆ ಅಯ್ಕೆ ಮಾಡಿಕೊಂಡು ಮೌಲ್ಯಮಾಪನವನ್ನು ಮಾಡಲಾಗುವುದು. ಪ್ರಬಂಧಗಳು ೧೦೦೦ ಪದಗಳನ್ನು ಮೀರುವಂತಿಲ್ಲ. ಇಂಗ್ಲೀಷಿನಲ್ಲಿ ಬರೆಯುವವರು ಏರಿಯಲ್ ಫಾಂಟ್ ೧೪ ಸೈಜ್ ಬಳಸಬೇಕು. ಕನ್ನಡದಲ್ಲಿ ಬರೆಯುವವರು ಯುನಿಕೋಟ್ ೧೨ ಸೈಜ್ ಬಳಸಬೇಕು. ಪಿಡಿಎಫ್ ಫಾರ್ಮಾ್ಯಟ್‌ನಲ್ಲಿ ಮಾತ್ರ ಕಳುಹಿಸುವುದು.ಕೃತಿ ಚೌರ್ಯ ತಿರಸ್ಕರಿಸಲಾಗುವುದು. ಪ್ರಬಂಧದ ಜೊತೆಯಲ್ಲಿ ಕಾಲೇಜಿನ ಗುರುತಿನ ಚೀಟಿಯನ್ನು ಕಳುಹಿಸಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಪ್ರತಿನಿಧಿಗಳಿಗೂ ಇ- ಸರ್ಟಿಫಿಕೇಟ್ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರೊ.ಯು.ಆರ್. ರಾವ್ ವಿಜ್ಞಾನ ಭವನ, ಜಿ.ಕೆ.ವಿ.ಕೆ. ಅವರಣ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ , ವಿದ್ಯಾರಣ್ಯಪುರ, ಪೋಸ್ಟ್, ಬೆಂಗಳೂರು-೫೬೦೦೯೭ ದೂರವಾಣಿ ಸಂಖ್ಯೆ೦೮೦-೨೯೭೨೧೫೫೦ ಸಂಪರ್ಕಿಸಬಹುದಾಗಿದೆ.