ಕುಷ್ಟಗಿ:- ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಸಶಕ್ತ ಗುಣಾತ್ಮಕ ಶಿಕ್ಷಣದ ಮಾತ್ರ ಸಾಧ್ಯ ತಾಲೂಕಿನ ವಣಿಗೇರಿ ಗ್ರಾಮದಲ್ಲಿ ನಡೆದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಶಿಕ್ಷಕರು ಕ್ರಿಯಾಶೀಲ ಕಾರ್ಯನಿರ್ವಹಣೆ , ಬೋಧನಾ ವಿಧಾನದಲ್ಲಿ ನವೀನ ತಂತ್ರಜ್ಞಾನದ ಬಳಕೆಯಿಂದ ಮಕ್ಕಳ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವುದರ ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಪ್ರತಿಯೊಬ್ಬರು ಶ್ರಮಿಸಲು ಕರೆ ನೀಡಿದರು, ಶಿಕ್ಷಕರು ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿ ಆಗಿದ್ದು ಸಮಾಜಮುಖಿಯಾಗಿ ಸೇವೆಸಲ್ಲಿಸುವ ಅತ್ಯಂತ ಶ್ರೇಷ್ಠವಾಗಿದೆ, ಉತ್ತಮ ಕಾರ್ಯ ನಿರ್ವಹಿಸುವ ಶಿಕ್ಷಕರಿಗೂ ಎಲ್ಲಾ ಕಾಲದಲ್ಲೂ ಗೌರವದಿಂದ ಕಾಣುವುದನ್ನು ನೋಡಬಹುದಾಗಿದೆ ಶಿಕ್ಷಕರು ಸಮಾಜಮುಖಿಯಾದರೆ ಮಾತ್ರ ಸಮಸಮಾಜದ ಕನಸನ್ನು ನನಸಾಗಲು ಸಾಧ್ಯ ವಾಗುತ್ತದೆ, ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಿದ್ದರಾಗಿರಿ ಎಂದು ಕರೆ ನೀಡಿದರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂ ಕೃಷಿ-ಸಾಂಸ್ಕೃತಿಕ ಸಂಸ್ಥೆ ಕಲಬುರ್ಗಿ, ಮತ್ತು ವಿಕಾಸ ಅಕಾಡೆಮಿ ಕುಷ್ಟಗಿಯ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು , ಗ್ರಾಮ ಪಂಚಾಯತಿ ಅಧ್ಯಕ್ಷರಾ ದ್ಯಾಮಣ್ಣ ಗುಳದಳ್ಳಿ , ಎಸ್ಡಿಎಂಸಿ ಅಧ್ಯಕ್ಷ ರಾದ ವೆಂಕಪ್ಪ ವಡ್ಡರ್ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಪ್ಪ ಗುರಿಕಾರ್ ಶ್ರೀಮತಿ ಅಮರಮ್ಮ ಪೊಲೀಸ್ ಪಾಟೀಲ್, ಶ್ರೀಮತಿ ಹುಲಿಗೆಮ್ಮ ಹಿರೇಮನಿ, ಶ್ರೀಮತಿ ಲಕ್ಷ್ಮಮ್ಮ ಬಾವಿಕಟ್ಟಿ,ಈ ಶ್ರೀಮತಿ ಹನುಮವ್ವ ಮಸ್ಕಿ, ಗ್ರಾಮದ ಹಿರಿಯರಾದ ಅಶೋಕ ಚೌಕಿಮಠ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಶೋಕ್ ಇಳಿಗೇರ, ಶರಣಪ್ಪ ಚೌಡಕಿ , ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶೈಲ ಸೋಮನಕಟ್ಟಿ, ಶಿಕ್ಷಣ ಸಂಯೋಜಕರಾದ ತಿಮ್ಮಣ್ಣ ಹಿರೇಹಳ್ಳಿ ಶಿವಾನಂದ್ ಹಂಪಣ್ಣವರ ಬಿ ಆರ್ಪಿ ಜೀವನ್ ಸಾಬ್ ವಾಲಿಕಾರ್, ಜಿಲ್ಲಾ ಸಂಯೋಜಕರಾದ ಶೇಖರ ಗಡಾದ, ತಾಲೂಕು ಸಂಯೋಜಕರಾದ ಬುಡ್ಡನಗೌಡ ತಳವಾರ್ ,ಮುಖ್ಯ ಶಿಕ್ಷಕರಾದ ಈರಪ್ಪ ರಾಥೋಡ್, ಎಸ್ಡಿಎಂಸಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು ಶ್ರೀ ಹನುಮಂತಪ್ಪ ಹಾಗೂ ಮಂಜುನಾಥ ಬಾವಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ