ಬೆಳಗಾವಿ: ಜಿಲ್ಲೆಯ ಕಿತ್ತೂರು ಚನ್ನಮ್ಮ ತಾಲೂಕಿನ ತುರಮರಿ ಗ್ರಾಮದಲ್ಲಿ ಹನುಮಜಯಂತಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಸಮಾರಂಭ ಹಾಗೂ ನೂತನ ಕಳಸಾರೋಹಣ ಕಾರ್ಯಕ್ರಮವನ್ನು ತುರಮರಿ ಗ್ರಾಮದ ಸರ್ವ ನಾಗರಿಕರಿಂದ ಹಾಗೂ ದೇವಸ್ಥಾನದ ಸಮಿತಿಯವರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತರ ಸದಿಚ್ಚೆಯ ಮೇರೆಗೆ ಅತಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಾಂತಾಚಾರ್ಯ ವಿದ್ವಾನ ಡಾಕ್ಟರ್ ಮಹಾಂತೇಶ ಶಾಸ್ತ್ರಿಗಳು ಮುರಗೈನವರ ಹಿರೇಮಠ ತುರಮರಿ ಇವರ ವೈದಿಕತ್ವದಲ್ಲಿ ಶುದ್ಧ ಬ್ರಾಹ್ಮಿ ಮುಹೂರ್ತದಲ್ಲಿ ಮಹಾಸಂಕಲ್ಪದೊಂದಿಗೆ ಗಂಗಾ ಪೂಜೆ ಮಹಾಗಣಪತಿ ಪೂಜಾ ಪೂರ್ವಕವಾಗಿ .
ಏಕಾದಶ ರುದ್ರಾಭಿಷೇಕ .ಪುಣ್ಯಾಹ ನಾಂದಿ ಉಮಾಮಹೇಶ್ವರ ಪೂಜೆಯೊಂದಿಗೆ ಹಲವಾರು ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಗಣಹೋಮ, ಅಘೋರ ಹೋಮ, ಮಹಾಮೃತ್ಯುಂಜಯ ಹೋಮ, ಧನ್ವಂತರಿ ಹೋಮ, ಪವಮಾನ ಹೋಮ, ಜಯಾದಿ ಹೋಮದೊಂದಿಗೆ ಹಲವಾರು ಯಜ್ಞಯಾಗಗಳ ಮುಖಾಂತರವಾಗಿ ತುರಮರಿ ಗ್ರಾಮದ ಸಮಸ್ತ ಭಕ್ತರ ಮತ್ತು ಗುರು ಹಿರಿಯರ ಸಮ್ಮುಖದಲ್ಲಿ ಪೂರ್ಣಾಹುತಿ ಮಾಡಿ ಮಹಾಮಂಗಳಾರತಿಯನ್ನು ಮಾಡಲಾಯಿತು ತದನಂತರ ಸ್ತ್ರೀ ವೇದಮೂರ್ತಿ ಗಂಗಯ್ಯ ಸೋಮಯ್ಯ ಮುರಗೈನವರ. ಇವರ ಮನೆಯಲ್ಲಿ. ಇವರ ಭಕ್ತಿಯ ಸೇವಾರ್ಪಣೆ ಮಾಡಿರುವ ಕಳಸದ ಮಹಾಪೂಜೆಯೊಂದಿಗೆ ವಿವಿಧ ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಅತಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಮಾರುತಿ ಮಂದಿರದ ಗೋಪುರದ ಕಳಸಾರೋಹಣವನ್ನು ಅತಿ ಅದ್ದೂರಿಯಾಗಿ ನೆರವೇರಿಸಲಾಯಿತು