This is the title of the web page
This is the title of the web page

Please assign a menu to the primary menu location under menu

Local News

ಶುದ್ದ ಕುಡಿಯುವ ನೀರಿನ ಘಟಕಗಳ ಕಾರ್ಯಚರಣೆ


ಬೆಳಗಾವಿ, ಜು.೨೦ : ಖಾನಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮತ್ತು ಕಾರ್ಯಚರಣೆ ಇನ್ನು ಮುಂದೆ ಗ್ರಾಮ ಪಂಚಾಯತಿಯಿಂದ ಮಾಡಬೇಕಾಗುತ್ತದೆ ಎಂದು ಖಾನಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವೀರಣ್ಣಗೌಡ ಅವರು ತಿಳಿಸಿದರು.
ಜು. ೧೯ ೨೦೨೩ ರಂದು ಜಿಲ್ಲಾ ಪಂಚಾಯತಿ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೆಳಗಾವಿ.ತಾಲೂಕು ಪಂಚಾಯತಿ ಖಾನಾಪುರ ಇವರ ಆಶ್ರಯಲ್ಲಿ ಖಾನಾಪುರ ತಾಲೂಕು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ವಾಟರ್ ಮನ್ ,ಪಂಪ್ ಆಪರೇಟರಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮತ್ತು ಕಾರ್ಯಚರಣೆ ಕುರಿತು ಹಮ್ಮಿಕೊಂಡ ಕಾರ್ಯಗಾರ ಉದೇಶಿಸಿ ಮಾತನಾಡಿದರು.
ಖಾನಾಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪವಿಭಾಗ ಪ್ರವೀಣ ಮಠಪತಿ ಜಲಜೀವನ್ ಮಿಷನ್ ಯೋಜನೆ, ಶುದ್ದ ಕುಡಿಯು ನೀರಿನ ಘಟಕಗಳ ಬಗ್ಗೆ ತರಬೇತಿ ನೀಡಿ ಯೋಜನೆ ಅನುಷ್ಠಾನ ಮಾಡುವ ಕುರಿತು ಈಖಿಏ ಕಿಟ್ ಮೂಲಕ ಗ್ರಾಮ ಪಂಚಾಯತಿ ಹಂತದಲ್ಲಿ ನೀರು ಪರೀಕ್ಷೆ ಮಹತ್ವದ ಕುರಿತು ಖಾನಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವೀರಣ್ಣಗೌಡ ಮಾಹಿತಿ ನೀಡಿದರು.
ಜಿಲ್ಲಾ ಯೋಜನಾ ವ್ಯವಸ್ಥಾಪಕರು ನೀಲಮ್ಮ ಕಮತೆ ಜಲಜೀವನ್ ಮಿಷನ್ ಆರೋಗ್ಯ ಇಲಾಖೆಯ ಅಧಿಕಾರಗಳು, ಸಹಾಯಕ ಅಬಿಯಂತರರು, ಖಾನಾಪುರ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ವಾಟರ್‌ಮನ್‌ಗಳು, ಖಾನಾಪುರ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪವಿಭಾಗ ಸಿಬ್ಬಂದಿಗಳು ಉಪಸ್ಥಿತರಿದ್ದರು.


Leave a Reply