ಬೆಳಗಾವಿ, ಜೂ.೨೬ : ಬೆಳಗಾವಿ ವಿಭಾಗದ ಬೆಳಗಾವಿ ನಗರ ಸಾರಿಗೆ ಘಟಕ-೨/೪ ರಿಂದ ಪ್ರಪ್ರಥಮ ಬಾರಿಗೆ ನಗರ/ಉಪನಗರ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಸಾರ್ವಜನಿಕ ಪ್ರಾಯಾಣಿಕರ ಅನುಕೂಲಕ್ಕಾಗಿ ನೂತನವಾಗಿ ಟ್ರಂಕ್ ರೂಟ್ ಮತ್ತು ರಿಂಗ್‌ರೂಟ್ ಮಾದರಿಯಲ್ಲಿ ಸಾರಿಗೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ.ಸದರಿ ಸಾರಿಗೆಗಳ ಕಾರ್ಯಾಚರಣೆಯಿಂದ ಸಾರ್ವಜನಿಕ ಪ್ರಯಾಣಿಕರು ಶಾಲಾ ಕಾಲೇಜು ವಿದ್ಯಾರ್ಥಿಗಳು ನಗರ ಉಪನಗರ ವ್ಯಾಪ್ತಿಯ ಒಂದು ತುದಿಯಿಂದ ಮತ್ತೊಂದು ತುದಿಯ ವರೆಗೆ ನೇರವಾಗಿ ಪ್ರಯಾಣಿಸುವ ಸೌಲಭ್ಯಗಳನ್ನು ನೀಡುವುದರೊಂದಿಗೆ ??? ನಿಲ್ದಾಣಗಳಲ್ಲಿಯ ದಟ್ಟನೆ ಯನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಲಾಗಿದೆ.
ಸದರಿ ಯೋಜನೆಯಲ್ಲಿ ಅಳವಡಿಸಲಾದ ಮಾರ್ಗ ಮತ್ತು ಸರತಿಗಳ ವಿವರ :
ಸಂತಿಬಸ್ತವಾಡ – ಚಂದಗಡ ಮಾರ್ಗ ಸಂಖ್ಯೆ ಟ್ರಂಕ್ ರೂಟ್-೧, ಪೀರನವಾಡಿ, ಆರ್ ಪಿ ಡಿ, ರೈಲ್ವೆ ನಿಲ್ದಾಣ, ಸಿ ಬಿ ಟಿ, ಸುರಭಿ, ಕಣಬರ್ಗಿ, ಹಾಗೂ ಮುಚ್ಚಂಡಿ. ಪ್ರತಿದಿನ ೨೯ ಸರತಿಗಳು( ಪ್ರತಿ ೧೫-೩೦ ನಿಮಿಷಕ್ಕೆ ಒಂದರಂತೆ )
ಚಂದಗಡ – ಸಂತಿಬಸ್ತವಾಡ ಮಾರ್ಗ ಸಂಖ್ಯೆ ಟ್ರಂಕ್ ರೂಟ್-೨, ಮುಚ್ಚಂಡಿ, ಕಣಬರ್ಗಿ, ಸುರಭಿ, ಸಿ ಬಿ ಟಿ, ರೈಲ್ವೆ ನಿಲ್ದಾಣ, ಆರ್ ಪಿ ಡಿ,ಪೀರನವಾಡಿ. ಪ್ರತಿದಿನ ೨೯ ಸರತಿಗಳು( ಪ್ರತಿ ೧೫-೩೦ ನಿಮಿಷಕ್ಕೆ ಒಂದರಂತೆ ) ಹಲಗಾ ಬಸ್ತವಾಡ – ಆರ್ ಸಿ ಯು ಮಾರ್ಗ ಸಂಖ್ಯೆ ಟ್ರಂಕ್ ರೂಟ್-೩, ಅಲರವಾಡ ಕ್ರಾಸ್, ಹಳೆ ಪಿ.ಬಿ ರಸ್ತೆ, ಸಿಬಿಟಿ, ಕಿತ್ತೂರು ಚನ್ನಮ್ಮ ಸರ್ಕಲ, ಕೆ ಎಲ್ ಇ, ಕಾಕತಿ, ಹೊನಗಾ. ಪ್ರತಿದಿನ ೩೨ ಸರತಿಗಳು( ಪ್ರತಿ ೩೦ ನಿಮಿಷಕ್ಕೆ ಒಂದರಂತೆ ) ಸಿ ಬಿ ಟಿ – ವಂಟಮುರಿ-ರಾಮತೀರ್ಥ ನಗರ -ಸಿಬಿಟಿ ಮಾರ್ಗ ಸಂಖ್ಯೆ ರಿಂಗ್ ರೂಟ್-೫, ಅಶೋಕ ನಗರ, ಶ್ರೀನಗರ ಗಾರ್ಡನ್, ವಂಟಮುರಿ, ರಾಮತೀರ್ಥ ನಗರ ದತ್ತ ಮಂದಿರ, ಮಹಾಂತೇಶ ನಗರ. ಪ್ರತಿದಿನ ೪೦ ಸರತಿಗಳು( ಪ್ರತಿ ೧೫ ನಿಮಿಷಕ್ಕೆ ಒಂದರಂತೆ ) ಸಿಬಿಟಿ- ರಾಮತೀರ್ಥ ನಗರ – ವಂಟಮುರಿ -ಸಿಬಿಟಿ ಮಾರ್ಗ ಸಂಖ್ಯೆ ರಿಂಗ್ ರೂಟ್-೬, ಮಹಾಂತೇಶ ನಗರ, ದತ್ತ ಮಂದಿರ, ರಾಮ ತೀರ್ಥ ನಗರ ವಂಟಮುರಿ, ಶ್ರೀನಗರ ಗಾರ್ಡನ, ಅಶೋಕ ನಗರ. ಪ್ರತಿದಿನ ೪೦ ಸರತಿಗಳು( ಪ್ರತಿ ೧೫ ನಿಮಿಷಕ್ಕೆ ಒಂದರಂತೆ ) ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಪ್ರಯೋಜನ ಪಡೆದು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಹುದು ಎಂದು ವಾಕರಸಾಸಂಸ್ಥೆ? ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ??? ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಬೆಳಗಾವಿ ನಗರದಲ್ಲಿ ಟ್ರಂಕ್ ಮತ್ತು ರಿಂಗ್ ರೂಟ್ ಮಾದರಿಯ ಸಾರಿಗೆಗಳ ಕಾರ್ಯಾಚರಣೆ
ಬೆಳಗಾವಿ ನಗರದಲ್ಲಿ ಟ್ರಂಕ್ ಮತ್ತು ರಿಂಗ್ ರೂಟ್ ಮಾದರಿಯ ಸಾರಿಗೆಗಳ ಕಾರ್ಯಾಚರಣೆ
Suresh26/06/2023
posted on