ಖಾನಾಪುರ:ತಾಲೂಕಿನ ಲೋಕೊಳಿ ಗ್ರಾಮ ಪಂಚಾಯತಿಯಲ್ಲಿ ರೂ. 2,50,000/-ಗಳನ್ನು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದೇವಿ ಜಾತ್ರಾ ಕಮೀಟಿಯ ಉಪಾಧ್ಯಕ್ಷರಾದ ತುಕಾರಾಮ ಬಳವಂತ ಚವ್ಹಾನ ಮತ್ತು ಅಜಿತ ಮಹಾದೇವ ಪಾಟೀಲ, ಇವರು ಗ್ರಾಮದೇವಿ ಜಾತ್ರಾ ತೆರಿಗೆಯನ್ನು ಕಟ್ಟಲು ತೆಗೆದುಕೊಂಡಿದ್ದು.
ಸದರಿ ವಿಷಯದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದಾಗ ಸದರಿ ಗ್ರಾಮದೇವಿ ಜಾತ್ರಾ ನಿಮಿತ್ಯ ಯಾವುದೇ ಹಣದ ರೂಪದಲ್ಲಿ ತೆರಿಗೆ ಜಮೆಯಾಗಿರುವುದಿಲ್ಲ ಅಂತಾ ಗ್ರಾಮ ಪಂಚಾಯತಿಯಿಂದ ಮಾಹಿತಿಯನ್ನು ನೀಡಿರುತ್ತಾರೆ. ಹಾಗೂ ಸದರಿ ಗ್ರಾಮ ಪಂಚಾಯತಿಯಲ್ಲಿ ಸಿ.ಸಿ. ಚರಂಡಿ, ಜೆ.ಜೆ.ಎಂ., ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೋಜನೆ ಹಾಗೂ ಇತರೇ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿದೇ, ಗ್ರಾಮ ಪಂಚಾಯತಿಯ ಅಧಿಕಾರಿ ಹಾಗೂ ಗ್ರಾಮ ಪಂಚಾಯತ ಕಮೀಟಿಯವರು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ದೂರು ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಪ್ರಸ್ತಾಪಿತ ವಿಷಯದ ಕುರಿತು ಸ್ಥಾನಿಕ ಭೇಟಿ ನೀಡಿ, ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಕೊಂಡು ಅರ್ಜಿದಾರರಿಗೆ ಹಿಂಬರಹ ನೀಡಿ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.