ಕುಷ್ಟಗಿ:-ದಿನಾಂಕ :೧೨-೦೧-೨೦೨೨ರಂದು ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಕೊಪ್ಪಳ ಹಾಗೂ ಶ್ರೀ ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಸ್ಥೆ ಕುಷ್ಟಗಿ ಇವರು ಹಿರೇಮನ್ನಪೂರ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ ಜನಪದ ಸಂಗೀತ ಕಾರ್ಯಕ್ರಮ
ಉದ್ಘಾಟಿಸಿದ ವಿ.ಎಸ್.ಕಾಡ್ಗಿಮಠರವರು ಮಾತನಾಡಿ ಜನಪದಕಲೆಯ ಮೂಲ ಬೇರು ಜನರ ಬಾಯಿಂದ-ಬಾಯಿಗೆ ಹರಿದುಬಂದ ಮೌಖಿಕ ಪರಂಪರೆಯನ್ನು ಪರಿಚಯಿಸುವ ಜನಪದಗಳು ತ್ರಿಪದಿಯಲ್ಲಿವೆ.ಮಹಿಳೆಯರ ಗರತಿಯ ಸಂಪ್ರದಾಯದ ಬೀಸುವಕಲ್ಲಿನ ಹಾಡು ಶೋಭಾನಪದ, ಹಾಗೂ ರೈತಪರಂಪರೆ
ಯನ್ನುಪರಿಚಯಿಸುವ ಹಂತಿಪದಗಳುಸಹ ತ್ರಿಪದಿಯಲ್ಲಿವೆ. ಹೀಗಾಗಿಜನಪದಕ
ಲೆಯ ತಾಯಿಬೇರು ತ್ರಿಪದಿಎಂದು ಮಾತನಾಡಿದರು. ಶಿಕ್ಷಕರಾದ ಶಿವಾನಂದ.
ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ.ವಾಯ್. ಚಿದಾನಂದ. ಗಂಗನಾಳ.ಇಮಾಮಸಾಬ. ಕೊಳೂರ. ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ವಾಲ್ಮೀಕಪ್ಪ ಯಕ್ಕರನಾಳ. ಜನಪದ, ತ್ರಿಪದಿ ತತ್ವಪದಗಳನ್ನು ಹಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ಎಸ.ಎಸ. ಹಿರೇಮಠ. ತಬಲಾಸಾಥನೀಡಿದರು. ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ಹುಸೇನಸಾಬರುಹಾರ್ಮೋನಿಯಂ, ಸಾಥ ನೀಡಿದರು. ಶ್ರೀ ಪ್ರಲ್ಹಾದಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ