This is the title of the web page
This is the title of the web page

Please assign a menu to the primary menu location under menu

Local News

ನಮ್ಮ ದೇಶ ಖುರಾನ್ ಆಧಾರದ ಮೇಲೆ ನಡೆಯಲ್ಲ. ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ: ಪ್ರಮೋಧ ಮುತಾಲಿಕ್


ಬೆಳಗಾವಿ: ಮುಸ್ಕಾನ್ ಮನೆಗೆ ಮಹಾರಾಷ್ಟ್ರ ಮುಸ್ಲಿಂ ಎಂಎಲ್‍ಎ ಆಗಮಿಸಿ ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ನಲ್ಲಿ ಏನಿದೆ‌, ಎಲ್ಲಿಂದ ಬಂತು ಎನ್ನುವ ತನಿಖೆಗಾಗಿ ಮೊಬೈಲ್ ಸೀಜ್ ಮಾಡಬೇಕು. ಅಲ್ ಖೈದಾ ಈ ದೇಶದಲ್ಲಿ ಮೂಗು ತೋರಿಸುವ ಅವಶ್ಯಕತೆ ಇಲ್ಲ. ನಮ್ಮ ದೇಶ ತಾಲಿಬಾನ್ ಅಲ್ಲ. ನಮ್ಮ ದೇಶ ಖುರಾನ್ ಆಧಾರದ ಮೇಲೆ ನಡೆಯಲ್ಲ. ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ. ಮುಸ್ಕಾನ ಹೊಗಳುವ ಅವಶ್ಯಕತೆ ಇಲ್ಲ. ಹಿಜಾಬ್ ಬಗ್ಗೆ ಮಾತನಾಡದೇ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಪ್ರಮೋದ ಮುತಾಲಿತ್ ಆಗ್ರಹಿಸಿದರು.

ಅಲ್ಲಾಹು ಅಕಬರ್ ಘೋಷಣೆ ಕೂಗಿದ್ದ ಮಂಡ್ಯದ ಮುಸ್ಕಾನ್‍ಳನ್ನು ಅಲ್ ಖೈದಾ ಉಗ್ರ ಸಂಘಟನೆ ಪ್ರಮುಖ ಜವಹರಿ ಹೊಗಳಿದ್ದು ಅತ್ಯಂತ ಖಂಡನೀಯವಾಗಿದೆ. ಸರಕಾರ ಇದನ್ನು ಹಗುರವಾಗಿ ಪರಿಗಣೀಸಬಾರದು. ಬಿನ್ ಲಾಡೆನ್ ನಂತರ ಅಲ್ ಖೈದಾದ ಪ್ರಮುಖ ಜವಹರಿ ನಿಷೇಧಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ಉಗ್ರ ಸಂಘಟನೆಯಿಂದ ಬಿಡುಗಡೆಯಾದ ಈ ವ್ಯಕ್ತಿಯ ವಿಡಿಯೋ ಎಲ್ಲಿಂದ ಬಂತು. ಹೇಗೆ ಬಂತು. ಅದು ಮಂಡ್ಯದ ಮುಸ್ಕಾನ್‍ವರೆಗೆ ಹೇಗೆ ಬಂತು. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಮುಸ್ಕಾನ್ ಹಾಗೂ ಅವರ ತಂದೆಯ ಬಂಧನ ಮಾಡಿ ತನಿಖೆ ನಡೆಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ ಖೈದಾಗೆ ಆರ್.ಎಸ್‍.ಎಸ್ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವಾಗ ಚುನಾವಣೆ ಬರುತ್ತೋ ಆಗ ಆರ್‍ಎಸ್‍ಎಸ್ ಬೈಯುತ್ತಾರೆ. ಮುಸ್ಲಿಂ ಮತಕ್ಕಾಗಿ ಆರ್‍ಎಸ್‍ಎಸ್ ಬೈಯುತೀರಿ. ಆರ್‍ಎಸ್‍ಎಸ್‍ನ್ನು ಅಲ್ ಖೈದಾಗೆ ಹೋಲಿಕೆ ಮಾಡುತ್ತಾರೆ.

ಅಲ್ ಖೈದಾ ಟೆರರಿಸ್ಟ್ ಸಂಘಟನೆ ಎನ್ನುವುದು ಜಗತ್ತಿಗೆ ಗೊತ್ತಿದೆ. ಆರ್‍ಎಸ್‍ಎಸ್ ಎಂದಾದ್ರೂ ದೇಶ ದ್ರೋಹಿ ಕೆಲಸ ಮಾಡಿದೆಯೇ. ಆರ್‍ಎಸ್‍ಎಸ್ ಸಂಘಟನೆಯನ್ನು ಅಲ್ ಖೈದಾಗೆ ಹೋಲಿಕೆ ಮಾಡಿದ್ದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ ಎಂದು ಸಿದ್ದರಾಮಯ್ಯ ವಿರುದ್ದ ಗುಡುಗಿದರು.

ಮುಜರಾಯಿ ಇಲಾಖೆ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಚಾರಕ್ಕೆ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧಕ್ಕೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಶೀಘ್ರ ಭೇಟಿಗೆ ನಿರ್ಧರಿಸಿದ್ದೇನೆ.

ಮುಜರಾಯಿ ಇಲಾಖೆ ವ್ಯಾಪ್ತಿ ದೇವಸ್ಥಾನಗಳಲ್ಲಿನ ಮುಸ್ಲಿಂ ವ್ಯಾಪಾರಿಗಳನ್ನು ಕಾಯ್ದೆ ಪ್ರಕಾರ ನೋಟಿಸ್ ನೀಡಿ ತೆರವು ಕಾರ್ಯ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದೇವೆ ಎಂದು ಪ್ರಮೋದ ಮುತಾಲಿಕ ತಿಳಿಸಿದರು.


Leave a Reply