ಚಿಕ್ಕೋಡಿ : ಕಾಂಗ್ರೆಸ್, ಜೆಡಿಎಸ್ ತೆಕ್ಕೆಯಲ್ಲಿರುವ 100 ಕ್ಷೇತ್ರಗಳನ್ನು ಪಕ್ಷ ಆಯ್ಕೆ ಮಾಡಿಕೊಂಡಿದ್ದು ಪ್ರತಿ ಕಾರ್ಯಕರ್ತನಿಗೂ ತಲಾ 25 ವೋಟ್ಗಳನ್ನು ಸೆಳೆಯುವ ಜವಾಬ್ದಾರಿ ನೀಡಲಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ನಡೆದ ಸಂಕಲ್ಪ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 100 ಕ್ಷೇತ್ರಗಳನ್ನು ಆಯ್ಕೆ ಮಾಡಿ ಅವುಗಳ ಗೆಲುವಿಗೆ ಶ್ರಮಿಸುತ್ತಿದ್ದೇವೆ.
ಜಿಲ್ಲೆಯಲ್ಲಿ ಐದು ಕ್ಷೇತ್ರಗಳ ಟಾರ್ಗೆಟ್ ಮಾಡಿದ್ದೇವೆ. ಒಬ್ಬೊಬ್ಬ ಕಾರ್ಯಕರ್ತನಿಗೆ 21 ಮತಗಳ ಜವಾಬ್ದಾರಿ ನೀಡಲಾಗಿದೆ. ರಾಜಕಾರಣದಲ್ಲಿ 51 ಪರ್ಸೆಂಟ್ ನೂರಕ್ಕೆ ಸಮಾನ 49 ಪರ್ಸೆಂಟ್ ಶೂನ್ಯಕ್ಕೆ ಸಮಾನ ಎಂದರು.
ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ಸವದಿಯವರಿಗೆ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು , ಯಾವ ಕುದುರೆ ಓಡುತ್ತೋ ಅದಕ್ಕೆ ಜಿದ್ದು ಕಟ್ಟುತ್ತಾರೆ. ಯಮಕನಮರಡಿ, ಚಿಕ್ಕೋಡಿ, ಬೆಳಗಾವಿ ಗ್ರಾಮೀಣ, ಖಾನಾಪುರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೇನೆ ಎಂದರು.
ಇನ್ನು ಪಂಚಮಸಾಲಿ ಹೋರಾಟದ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಚಿಂತನೆ ಬಗ್ಗೆ ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳು ಬದ್ಧರಾಗಿದ್ದಾರೆ ಎಂದರು.