ಬೆಂಗಳೂರು ಸೆ ೯ : ದೇಶದ ಐಕ್ಯತೆ, ಸಂವಿಧಾನ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಎಸ್ ಎಸ್ ಎಫ್ ಕೆಲಸ ಮಾಡಬೇಕು. ಇದಕ್ಕಾಗಿ ತಮ್ಮ ಶಕ್ತಿ, ಸಂಘಟನೆಯನ್ನು ಮುಡಿಪಾಗಿ ಇಟ್ಟು ಅಭಿವೃದ್ಧಿ ದಿಕ್ಕಿನಲ್ಲಿ ದೇಶವನ್ನು ವೇಗವಾಗಿ ಮುನ್ನಡೆಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕರೆ £Ãಡಿದರು.
ಅರಮನೆ ಮೈದಾನದಲ್ಲಿ ನಡೆದ ಸು£್ನ ಸ್ಟೂಡೆಂಟ್ ಫೆಡರೇಷನ್ (SSಈ) ಗೋಲ್ಡನ್ ೫೦ ಸಮಾವೇಷದಲ್ಲಿ ಮಾತನಾಡಿದರು.
ಸಾಮರಸ್ಯ ಭಾರತದ ಮಣ್ಣಿನ ಗುಣ. ೫೦ ವರ್ಷಗಳಿಂದ ದೇಶದ ಸೌಹಾರ್ದ ಮತ್ತು ಸಾಮರಸ್ಯದ ಸಂಸ್ಕöÈತಿ ರಕ್ಷಿಸಲು ಹೋರಾಡುತ್ತಿರುವ ಸಂಘಟನೆ ಎಂದು ಕೇಳಿದ್ದೇನೆ. ದೇಶದ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸಬೇಕು. ಸಂವಿಧಾನದ ಮೌಲ್ಯಗಳು ಉಳಿದರೆ ದೇಶ ಉಳಿಯುತ್ತದೆ ಎಂದರು.
ಭಾರತ ಪ್ರತಿಯೊಬ್ಬ ಭಾರತೀಯರಿಗೂ ಸೇರಿದ್ದು. ನಮ್ಮ ನಾಡು ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಸೂಫಿ-ಸಂತರ ತಪಸ್ಸು ಮತ್ತು ಮೌಲ್ಯಗಳಿಂದ ರೂಪುಗೊಂಡಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನಬದ್ದವಾದ ರಕ್ಷಣೆ ಇದೆ. ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯಕ್ಕೆ, ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ £Ãಡುವುದಿಲ್ಲ ಎಂದು ಭರವಸೆ £Ãಡಿದರು
ಗ್ರಾಂಡ್ ಮಫ್ತಿ ಆಫ್ ಇಂಡಿಯಾ ಶೇಖ್ ಅಬೂಬ್ ಕರ್ ಅಹಮದ್ ಅವರು ದಿವ್ಯ ಸಾ£್ನಧ್ಯ ವಹಿಸಿದ್ದ ಸಮಾವೇಷದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಜಮೀರ್ ಅಹಮದ್ , ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಾಸಿರ್ ಅಹಮದ್ ಸೇರಿ ಎಸ್ ಎಸ್ ಎಸ್ ನ ರಾಜ್ಯ ಮುಖಂಡರುಗಳು ಮತ್ತು ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
Gadi Kannadiga > State > ದೇಶದ ಸಂವಿಧಾನ-ಸಾಮರಸ್ಯ ಸಂಸ್ಕöÈತಿ ನಮ್ಮ ಶಕ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ದೇಶದ ಸಂವಿಧಾನ-ಸಾಮರಸ್ಯ ಸಂಸ್ಕöÈತಿ ನಮ್ಮ ಶಕ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Suresh11/09/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023