ಬೆಳಗಾವಿ* ನಗರದ ರಾಮಲಿಂಗಕಿಂಡ ಗಲ್ಲಿಯ, ನ್ಯೂಕ್ಲಿಯಸ್ ಮಾಲ್ ಎದುರುಗಡೆ ಇರುವ ಮನೆಯು ನಿನ್ನೆ ಅಂದರೆ 22 ನೆ ತಾರೀಖಿನ ಶುಕ್ರವಾರ ರಾತ್ರಿ 1-30 ರ ಸುಮಾರಿಗೆ ಜೆಸಿಬಿ ಯಿಂದ ದ್ವಂಸ ಮಾಡಲಾಗಿದೆ.
ಈ ಘಟನೆಯ ಕುರಿತಾಗಿ ಮಾತನಾಡಿದ ಮನೆ ಮಾಲೀಕನ ಅಕ್ಕ, ಲತಾ ಪ್ರಕಾಶ್ ಗೋರ್ಪಡೆ ಘಟನೆಯ ಕುರಿತಾಗಿ ಈ ರೀತಿ ಹೇಳಿದ್ದಾರೆ..
ದೂರದ ಸಂಬಂಧಿಕರ ನಡುವೆ ಆಸ್ತಿಗಾಗಿ ತಗಾದೆ ಇದ್ದು, ಈ ವಿಷಯ ಕೋರ್ಟನಲ್ಲಿತ್ತು, ಸುಮಾರು 60 ವರ್ಷಗಳಿಂದ ಕೆಸ್ ನಡೆದು ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು, ನಮ್ಮ ತಾಯಿಯಾದ ಇಂದುಮತಿ ವಸಂತ ದೇಸಾಯಿ ಹಾಗೂ ಪರಶುರಾಮ ಕೌಜಲಗಿ ಹಾಗೂ ಅವನ ತಂಗಿ ಕವಿತಾ ಜಾಧವ ಇವರ ನಡುವೆ ಕೇಸ್ ನಡೆದಿತ್ತು..
ನಿನ್ನೆ ಮನೆಯಲ್ಲಿ ಇಂದುಮತಿ ಮಗನಾದ ಅನಿಲ್ ವಸಂತ ದೇಸಾಯಿ ಇರುತ್ತಿದ್ದ, ಏಕಾಏಕಿ ನಿನ್ನೆ ರಾತ್ರಿ 20 ಜನರ ಗುಂಪು, ಕುಡಿದು, ಮಾರಕಾಸ್ತ್ರದೊಂದಿಗೆ , ಜೆಸಿಬಿ ಮೂಲಕ ಬಂದು, ನನ್ನ ತಮ್ಮನನ್ನು ಹೆದರಿಸಿ ಮನೆಯಿಂದ ಹೊರಹಾಕಿ ಈ ರೀತಿಯಾಗಿ ಮೆನೆಎಲ್ಲಾ ನೆಲಸಮ ಮಾಡಿದ್ದಾರೆ ಎಂದರು..
ರಾಮಲಿಂಗ ಕಿಂಡ ಗಲ್ಲಿ ಈ ಮನೆಯ ಸಂಖ್ಯೆ 1670, ಈ ರೀತಿಯ ಗೂಂಡಾಗೆರಿಯಿಂದ ನಮ್ಮನ್ನ ಹೆದರಿಸಿದ್ದಾರೆ, ಇದಕ್ಕೆ ನಾವು ಸುಮ್ಮನಿರದೆ ಪೊಲೀಸ್ ಕಂಪ್ಲೀಟ್ ಕೊಡುವುದಾಗಿ ತಿಳಿಸಿದರು..
ಮನೆಯ ಪಕ್ಕದಲ್ಲೇ ಇರುವ ಪಾನ ಅಂಗಡಿವರು ಕೂಡಾ ಮಾತನಾಡಿ, ನಮ್ಮ ಅಂಗಡಿಗೂ ಹಾನಿ ಆಗಿ ಸುಮಾರು 10 ಸಾವಿರ ರೂಪಾಯಿಗಳ ಪದಾರ್ಥಗಳು ಹಾಳಾಗಿವೆ ಎಂದರು.