This is the title of the web page
This is the title of the web page

Please assign a menu to the primary menu location under menu

Local News

ದೈವ ಸ್ವರೂಪ ಜೀವವನ್ನು ರಕ್ಷಿಸಿಕೊಳ್ಳೋಣ: ಪಿ. ಮುರಳಿ ಮನೋಹರ ರೆಡ್ಡಿ


ಬೆಳಗಾವಿ,ಸೆ.೧೫: ಸಮಾಧಾನವಾಗಿ ಕ್ಷಣ ಯೋಚಿಸಿದರೆ ಸಮಸ್ಯಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯದ ಮನೋಬಾವವನ್ನು ಬೆಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಆತ್ಮ ಹತ್ಯೆಗೆ ಶರಣಾಗದೆ ದೇವರು ನೀಡಿದ ಜೀವಿತ ಅವಧಿಯನ್ನು ಪೂರ್ಣಗೊಳಿಸಬಹುದಾಗಿದೆ. ಆರೋಗ್ಯ ಇಲಾಖೆಯಿಂದ ಆಪ್ತ ಸಮಾಲೋಚನೆ ಹೆಚ್ಚಿಸಿ ಮಾನಸಿಕ ದೈರ್ಯವನ್ನ ತುಂಬಿಸುತ್ತಿರುವ ಕಾರ್ಯ ಶ್ಲಾಘನಿಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಪಿ ಮುರಳಿ ಮನೋಹರ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಬೆಳಗಾವಿ ಅವರ ಸಹಯೋಗದೊಂದಿಗೆ ಬಿಮ್ಸ್ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಆತ್ಮ ಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಮ್ಸ್ ನಿದೇಶಕರಾದ ಡಾ|| ಅಶೋಕಕುಮಾರ ಶೇಟ್ಟಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಅನೇಕ ಕಷ್ಠ ಕಾರ್ಪಣ್ಯಗಳು ಬರುತ್ತವೆ ಆ ಸಮಸ್ಯಗಳನ್ನು ಭರಿಸಿಕೊಳ್ಳದೇ ಆತ್ಮಹತ್ಯೆ ಮಾಡಿಕೊಳ್ಳುವುದು ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಆಸ್ಪತ್ರೆಗಳಿಗೆ ಬರುವವರಲ್ಲಿ ಮಾನಸಿಕ ರೋಗ ಮತ್ತು ಖಿನ್ನತೆಗೆ ಒಳಗಾಗಿರುವ ಜನರನ್ನು ಪತ್ತೆ ಹಚ್ಚಿ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಿ ಅವರಿಗೆ ಸಲಹೆ ಕೊಟ್ಟು ಅವರಲ್ಲಿ ಭರವಸೆ ಮೂಡಿಸು ಕೆಲಸವನ್ನು ನಾವು ನೀವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಬಿಮ್ಸ್ ಮಾನಸಿಕ ವಿಭಾಗದ ಮುಖ್ಯಸ್ಥ ಡಾ|| ಚಂದ್ರಶೇಖರ ಟಿ ಆರ್ ಮಾತನಾಡಿ, ಮಾನಸಿಕ ರೋಗಿಗಳು ಹುಟ್ಟಿನಿಂದ ಮಾನಸಿಕವಾಗಿರುವುದಿಲ್ಲ ಅವರ ಜೀವನದಲ್ಲಿ ನಡೆದ ಘಟನೆಗಳ ಅನುಗುಣವಾಗಿ ಅವರ ಮಾನಸಿಕ ಸ್ಥಿತಿ ಬದಲಾಗಿರುತ್ತೆ. ಅಂತವರನ್ನ ಪತ್ತೆ ಹಚ್ಚಿ ನಮ್ಮ ಆಸ್ಪತ್ರೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಹೇಶ ಕೋಣಿ ಮಾತನಾಡಿ, ಮುಂದುವರೆದ ರಾಷ್ಟ್ರಗಳಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ. ಶೇಕಡ ೭೦% ರಷ್ಟು ಪುರುಷರೆ ಆತ್ಮ ಹತ್ಯೆಗೆ ಒಳಗಾಗುತ್ತಿದ್ದಾರೆ. ೧೫ ರಿಂದ ೩೦ ವಯೋಮಾನದವರಲ್ಲಿ ಆತ್ಮಹತ್ಯೆ ಪ್ರಕರಣಗಳು ಕಂಡು ಬರುತ್ತವೆ. ಆದರಿಂದ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ಸಿಗಬೇಕು ಮತ್ತು ಜಿಲ್ಲೆಯಲ್ಲಿ ಇರುವ ಉಪಕೇಂದ್ರಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನಿಯುಕ್ತಗೊಳಸಲಾಗಿದ್ದು. ಪ್ರಕರಣಗಳನ್ನು ಪತ್ತೆ ಹಚ್ಚಿ ಆಪ್ತ ಸಮಾಲೋಚನೆ ಮಾಡಿ ಸೂಕ್ತ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಕಳುಹಿಸಿ ಗುಣಮಟ್ಟ ಚಿಕಿತ್ಸೆ ನೀಡಿದರೆ, ಮಾನಸಿಕ ದೈರ್ಯ ತುಂಬಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರ ಪತ್ತೆ ತ್ವರಿತ ಚಿಕಿತ್ಸೆ ನೀಡುವದರಿಂದ ರೋಗಿಗಳನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ|| ಚಾಂದನಿ ದೇವಡಿ ಅವರು, ಪ್ರತಿ ವರ್ಷ ಜಾಗತಿಕವಾಗಿ ೮ ಲಕ್ಷ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದು ನಮ್ಮ ರಾಜ್ಯದಲ್ಲಿಯೂ ಸಹ ಪ್ರತಿ ವರ್ಷ ೮ ರಿಂದ ೧೦ ಸಾವಿರ ಜನ ಆತ್ಮಹತ್ಯೆಗೆ ಒಳಗಾಗುತ್ತಿದ್ದು. ಇವರಲ್ಲಿ ಸುಮಾರು ಅರ್ಧದಷ್ಟು ಜನ ಮಾನಸಿಕ ಖಾಯಿಲೆ ಮತ್ತು ಖಿನ್ನತೆಗೆ ಒಳಗಾಗಿರುತ್ತಾರೆ. ಕೆಲವು ಜನ ಮದ್ಯಪಾನ ಮತ್ತು ಮಾದಕ ವಸ್ತಗಳಿಗೆ ಅವಲಂಭಿತರಾಗಿರುತ್ತಾರೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಇವರ ಬಾಳಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ “ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆಯನ್ನು ಮೂಡಿಸೋಣ” ಎಂಬ ಘೋಷ್ಯ ವಾಕ್ಯದೊಂದೊಗೆ ವಿಶ್ವ ಆತ್ಮ ಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ವಿಶ್ವದ್ಯಾಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ. ಮಹೇಶ ಕಿವಡಸನ್ನವರ ಜಿಲ್ಲಾಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ|| ಉತ್ತಮ ಶೆಲಾರ , ಡಾ|| ಅಣ್ಣಾಸಾಹೇಬ ಪಾಟೀಲ್ ವೈದ್ಯಕೀಯ ಅಧೀಕ್ಷಕರು ಬಿಮ್ಸ್ಆಸ್ಪತ್ರೆ ಬೆಳಗಾವಿ, ಡಾ|| ಸುಧಾಕರಆರ್ ಸಿ ಜಿಲ್ಲಾ ಶಸ್ತ್ರಚಿಕಿತ್ಸಕರು ಬಿಮ್ಸ್ ಆಸ್ಪತ್ರೆ ಬೆಳಗಾವಿ, ಡಾ|| ಪುಷ್ಪಾ ಸ್ಥಳಿಯ ನಿವಾಸಿ ವೈದ್ಯಾಧಿಕಾರಿಗಳು ಬಿಮ್ಸ್ ಆಸ್ಪತ್ರೆ ಬೆಳಗಾವಿ, ಶಿವಾಜಿ ಮಾಳಗೆಣ್ಣವರ ಆರೋಗ್ಯ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವ ಆತ್ಮ ಹತ್ಯೆ ತಡೆಗಟ್ಟುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಜ್ಞಾ ವಿಧಿಯನ್ನ ನಾಗರತ್ನಾ ದೊಡ್ಡಗಾಣಿಗೆರ ಬೋಧಿಸಿದರು. ಸವಿತಾ ತಿಗಡಿ ಸ್ವಾಗತಿಸಿದರು ಡಾ|| ಸುನೀಲ ಜಾಬಗೌಡರ ವಂದಿಸಿದರು. ಬಸವರಾಜ ಯಲಿಗಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ನಿರೂಪಿಸಿದರು.


Gadi Kannadiga

Leave a Reply