ಬಳ್ಳಾರಿ,:. ಎಂ.ದಿವಾಕರಬಾಬು ಅವರು ಈ ಹಿಂದೆ ಶಾಸಕರಾಗಿ, ಸಚಿವರಾಗಿ ಅಚ್ಚುಕಟ್ಟಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ, ಈ ಹಿಂದೆ ಬಳ್ಳಾರಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ದಿವಾಕರಬಾಬು ಅವರಿಗೆ ಟಿಕೆಟ್ ನೀಡಬೇಕೆಂದು ರೈಸ್, ಆಯಿಲ್,ತರಕಾರಿ ಮಾರುಕಟ್ಟೆ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ವೀರೇಶ್ ಅವರು ಮನವಿ ಮಾಡಿದ್ದಾರೆ. ಇಂದು ಬಿಜೆಪಿಯವರು ಹಮಾಲರಿಗೆ ನೀಡಿದ ನಿವೇಶನಗಳು ಈ ಹಿಂದೆ ದಿವಾಕರ್ ಬಾಬು ಅವರು ಶಾಸಕರಾಗಿದ್ದಾಗ ಕಾಯ್ದಿರಿಸಿಟ್ಟಿದ್ದ ನಿವೇಶನಗಳೇ ಎಂದು ತಿಳಿಸಿದರು.
ಅವರು ಜ ೩೧ ರಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈಸ್ ಮಿಲ್, ಆಯಿಲ್ ಮಿಲ್, ಎಸಿ ಗೋಡಾನ್, ಆಯಿಲ್ ಫಿಟ್ಟರ್, ಕಿರಾಣಿ ಮರ್ಚಂಟ್ಸ್ ಸೇರಿದಂತೆ ವಿವಿಧ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಉದ್ದಿಮೆಗಳಲ್ಲಿ ದುಡಿಯುತ್ತಿರುವ ೨ ಸಾವಿರಕ್ಕೂ ಹೆಚ್ಚು ಹಮಾಲರು ಎಂ.ದಿವಾಕರಬಾಬು ಅವರನ್ನು ಸಂಪರ್ಕಿಸಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ. ಈ ಕುರಿತು ಫೆಬ್ರವರಿ ೧೨ರಂದು ಮುಂಡ್ರಿಗಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿರುವ ಶ್ರೀ ಸೂಗೂರೇಶ್ವರ ರೈಸ್ ಮಿಲ್‌ನಲ್ಲಿ ಸಭೆ ಆಯೋಜಿಸಿದ್ದೇವೆ. ಅಂದು ಎಂ.ದಿವಾಕರಬಾಬು ಅವರನ್ನೂ ಸಹ ಆಹ್ವಾನಿಸಿದ್ದೇವೆ. ದಿವಾಕರಬಾಬು ಅವರು ಶಾಸಕರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಅವರು ಕೇವಲ ಹಮಾಲರಿಗಷ್ಟೇ ನಾಯಕರಲ್ಲ. ಎಲ್ಲ ಸಮುದಾಯಗಳ ಜನರೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಉತ್ತಮ ಒಡನಾಟ ಇರಿಸಿಕೊಂಡಿರುವ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದಲ್ಲಿ ನಗರ ಜನತೆ ಖಂಡಿತವಾಗಿಯೂ ಅವÀರನ್ನು ಗೆಲ್ಲಿಸಿಕೊಡಲಿದ್ದಾರೆ ಎನ್ನುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷ ಬಿ.ತಿಮ್ಮಪ್ಪ, ಮುಖಂಡರಾದ ರಾಮಬಾಬು, ಕಾರ್ಯಕಾರಿ ಸಮಿತಿ ಸದಸ್ಯರಾದ ನರಸಿಂಹುಲು, ನಾಗೇಶ, ವೆಂಕಟೇಶುಲು, ಲೋಕಪ್ಪ ಮತ್ತಿತರರು ಉಪಸ್ಥಿತರಿದ್ದರು.