This is the title of the web page
This is the title of the web page

Please assign a menu to the primary menu location under menu

State

ಮತದಾರರಲ್ಲಿ ಜಾಗೃತಿ ಮೂಡಿಸಲು ವಿಕಲಚೇತನರಿಂದ ಬೈಕ್ ರ‍್ಯಾಲಿ ವಿಕಲಚೇತನರು ತಪ್ಪದೇ ಮತ ಚಲಾಯಿಸಿ: ಪಿ.ವೈ. ಶೆಟ್ಟೆಪ್ಪನವರ


ಗದಗ ಎಪ್ರಿಲ್ ೧೯: ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನದ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ವಿಕಲಚೇತನರೂ ಸಹ ತಪ್ಪದೇ ಮತ ಚಲಾಯಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ತಿಳಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ನಗರಸಭೆ ಗದಗ-ಬೆಟಗೇರಿ ಇವರ ಸಹಯೋಗದಲ್ಲಿ ಬುಧವಾರದಂದು ನಗರದ ಜೋಡು ಮಾರುತಿ ದೇವಸ್ಥಾನದಿಂದ ಸ್ಟೇಶನ್ ರಸ್ತೆ ಮೂಲಕ ಗಾಂಧಿ ಸರ್ಕಲ್‌ವರೆಗೆ ವಿಕಲಚೇತನರಿಂದ ಮತದಾರರ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಯಂತ್ರಚಾಲಿತ ತ್ರಿಚಕ್ರ ವಾಹನದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ವಿಕಲಚೇತನರೂ ಸಹ ತಪ್ಪದೇ ತಮ್ಮ ಮತ ಚಲಾಯಿಸಬೇಕು. ವಿಕಲಚೇತನರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಂದು ಮತವು ಅಮೂಲ್ಯವಾಗಿದ್ದು ಅರ್ಹರು ತಪ್ಪದೇ ಮತ ಚಲಾಯಿಸಬೇಕು. ಯಾವುದೇ ಆಸೆ, ಅಮಿಷಕ್ಕೆ ಒಳಗಾಗದೇ ಅರ್ಹ ಮತದಾರರು ಮತದಾನ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ ಅವರು ಮಾತನಾಡಿ ಎಲ್ಲಾ ವಿಕಲಚೇತನರು ಮತದಾನ ಮಾಡಬೇಕು. ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಆಗದೇ ಇರುವ ವಿಕಲಚೇತನರು ಹಾಗೂ ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ೧೨ಡಿ ಫಾರಂಗಳನ್ನು ಸಂಬಂಧಪಟ್ಟ ಬಿ.ಎಲ್.ಒ.ಗಳ ಮೂಲಕ ನೀಡಲಾಗಿರುತ್ತದೆ. ೧೨ಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದವರಿಗೆ ಮೂಲಕ ತಮ್ಮ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದರು.
ಗದಗ ಬೆಟಗೇರಿ ನಗರಸಭೆ ಆಯುಕ್ತ ರಮೇಶ ಸುಣಗಾರ ಅವರು ಮಾತನಾಡಿ ಮತದಾನದ ದಿನದಂದು ತಪ್ಪದೇ ಎಲ್ಲ ಅರ್ಹರೂ ಮತದಾನ ಮಾಡುವಂತೆ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡ್ರ ಅವರು ಮಾತನಾಡಿ ಮೇ ೧೦ ರಂದು ಯಾವುದೇ ಪ್ರವಾಸ ಕೈಗೊಳ್ಳದೇ ಎಲ್ಲರೂ ಮತ ಚಲಾಯಿಸುವುದರ ಮೂಲಕ ಸದೃಢ ಪ್ರಜಾಪ್ರಭುತ್ವ ನಿರ್ಮಿಸಲು ಕೈ ಜೋಡಿಸಬೇಕು. ಎಲ್ಲರೂ ಮತ ಚಲಾಯಿಸಿ ಮನೆಯ ಅಕ್ಕಪಕ್ಕದವರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.ರ‍್ಯಾಲಿಯಲ್ಲಿ ಮೌನೇಶ ಮರಾಠೆ , ಮಹಬೂಬಿ, ಗಲಗಲಿ ಹಾಗೂ ರತ್ನಾ ಮುರಾರಿ ಇವರುಗಳು ವಿಕಲಚೇತನ ಹಾಗೂ ಹಿರಿಯ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ನೋಡಲ್ ಅಧಿಕಾರಿ ಲಲಿತಾ ಅಳವಂಡಿ, ಇಲಾಖೆಯ ಸಿಬ್ಬಂದಿಗಳು, ಎಂ.ಆರ್.ಡಬ್ಲೂö್ಯ, ಯು.ಆರ್.ಡಬ್ಲೂö್ಯ , ವಿ.ಆರ್. ಡಬ್ಲೂö್ಯ ಹಾಗೂ ದೈಹಿಕ ವಿಕಲಚೇತನರು ಹಾಜರಿದ್ದರು.


Leave a Reply