This is the title of the web page
This is the title of the web page

Please assign a menu to the primary menu location under menu

Local News

ಪದ್ಮಶ್ರೀ ಪಂಡಿತ್ ರಾಜೀವ ತಾರಾನಾಥಗೆ ಡಾಕ್ಟರ್ ಆಫ್ ಲೆರ‍್ಸ್ ಗೌರವ ಪ್ರದಾನ ವಿವಿಯ ಘನತೆ ಹೆಚ್ಚಿದೆ: ಕುಲಪತಿ ಪ್ರೊ. ರಾಮಚಂದ್ರಗೌಡ


ಬೆಳಗಾವಿ,ಏ.೨೮: ಸಂಗೀತ ಕ್ಷೇತ್ರದಲ್ಲಿ ಅವಿರತ ಸಾಧನೆಯ ಫಲವಾಗಿ ಇವತ್ತು ಪಂ. ರಾಜೀವ ತಾರಾನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಇದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘನತೆ ಹೆಚ್ಚಿದೆ ಎಂದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಾಮಚಂದ್ರಗೌಡ ಅವರು ಹೇಳಿದರು.
ಮೈಸೂರಿನ ಕುವೆಂಪುನಗರದ ಪಂಡಿತ್ ರಾಜೀವತಾರಾನಾಥ ಅವರ ನಿವಾಸದಲ್ಲಿ ಬುಧವಾರ(ಏ.೨೭) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ಖ್ಯಾತ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ ತಾರಾನಾಥ ಅವರಿಗೆ ಡಾಕ್ಟರೇಟ್ ಆಫ್ ಲೆರ‍್ಸ್ ಗೌರವ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಪಂ.ರಾಜೀವ ತಾರಾನಾಥ ಅವರು ಪದವಿ ಲಭಿಸಿದ್ದು ಹೆಮ್ಮೆ ಎನ್ನಿಸುತ್ತಿದೆ. ವಿಶ್ವ ವಿದ್ಯಾಲಯದ ಗೌರವಕ್ಕೆ ಆಭಾರಿ. ಇದು ನಮ್ಮ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಗೆ ಸಲ್ಲಬೇಕು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ ವ್ಹಿ ಬೆಟಕೋಟೆ ಹಾಗೂ ಕುಲಸಚಿವರಾದ ಡಾ. ಟಿ.ಎಸ್. ದೇವರಾಜ, ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ವೀರನಗೌಡ ಬಿ. ಪಾಟೀಲ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ.ಎನ್. ಪಾಟೀಲ ಮತ್ತು ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ ಶಾಸ್ತ್ರಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಇಂದೂಧರ ನಿರೋಡಿ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಅವರು ಸ್ವಾಗತಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ವೀರನಗೌಡ ಪಾಟೀಲ ಭಿನ್ನವತ್ತಳೆ ಓದಿದರು. ಗಣೇಶ ಅಮೀನಗಡ ಕಾರ್ಯಕ್ರಮ ನಿರೂಪಿಸಿದರು.


Gadi Kannadiga

Leave a Reply