ಗಡಿ ಕನ್ನಡಿಗ
ಖಾನಾಪುರ:ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಕೊಲೆಮಾಡಿ ನಂತರ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದ್ದು ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಮೃತಳಾದ ಬೀಡಿ ಗ್ರಾಮದ ರೇಷ್ಮಾ ತಿರವಿರ(29) ಹಾಗೂ ಪಾಗಲ್ ಪ್ರೇಮಿ ಆನಂದ್ ಸುತಾರ್ ಇಬ್ಬರು ಒಂದೇ ಗ್ರಾಮದವರಾಗಿದ್ದು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಕೊಲೆಗೆ ಅನೈತಿಕ ಸಂಬಂಧವೆ ಕಾರಣವೆನ್ನಲಾಗುತ್ತಿದ್ದು ರೇಷ್ಮಾಗೆ ಮದುವೆಯಾಗಿ ಎರಡು ಮಕ್ಕಳಿದ್ದರೆ ಇತ್ತ ಪ್ರಿಯಕರ ಆನಂದಗೂ ಮೂರು ಮಕ್ಕಳಿದ್ದು ಆನಂದ್ ಪತ್ನಿ ತುಂಬು ಗರ್ಬಿಣಿಯಾಗಿದ್ದಾಳೆ.
ಕಳೆದ ಕೆಲ ದಿನಗಳ ಹಿಂದೆ ವಿಷಯ ರೇಷ್ಮಾ ಗಂಡನಿಗೆ ತಿಳಿದಿತ್ತು ಮನೆಯಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆದಿದ್ದು ಈ ಕುರಿತಾಗಿ ರೇಷ್ಮಾಳ ಗಂಡ ಆನಂದ್ ಮೇಲೆ ನಂದಗಡ ಠಾಣೆಗೆ ದೂರು ನೀಡಿದ್ದು ಪೊಲೀಸರು ಆನಂದನ್ನ ಠಾಣೆಗೆ ಕರೆದು ಇನ್ನುಮುಂದೆ ರೇಷ್ಮಾಳ ಸಹವಾಸಕ್ಕೆ ಹೋಗದಂತೆ ಬುದ್ದಿವಾದ ಹೇಳಿ ಕಳುಹಿಸಲಾಗಿತ್ತು.
ಇದರಿಂದ ಕೋಪಗೊಂಡಿದ್ದ ಪಾಗಲ್ ಪ್ರೇಮಿ ಆನಂದ್ ಗುರುವಾರ ರಾತ್ರಿ ಬೇಟಿಯಾಗುವ ನೆಪದಲ್ಲಿ ತಡ ರಾತ್ರಿ ರೇಷ್ಮಾಳ ಮನೆಗೆ ತೆರಳಿ ಒಂಭತ್ತು ಬಾರಿ ಚಾಕುವಿನಿಂದ ಇರಿದಿದ್ದು ಸ್ಥಳದಲ್ಲೇ ಮೃತಪಟ್ಟರೆ ಅದೇ ಚಾಕುವಿನಿಂದ ಚುಚ್ಚಿಕೊಂಡ ಪ್ರೇಮಿ ಬೆಳಗಾವಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದು ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ವಿರೇಶ ಹಿರೇಮಠ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.