This is the title of the web page
This is the title of the web page

Please assign a menu to the primary menu location under menu

State

ಚಿತ್ರಕಲೆ, ವೇಷಭೂಷಣ ಸ್ಪರ್ಧೆ


ಗದಗಫೆಬ್ರುವರಿ ೨೭: ೨೦೨೨-೨೩ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಚಿತ್ರಕಲೆ, ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಯೋಮಿತಿ ೦೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಅವಕಾಶವಿದೆ. ಚಿತ್ರಕಲೆ ಸ್ಪರ್ಧೆಗೆ ೩ ಗುಂಪುಗಳಲ್ಲಿ, ೫ ರಿಂದ ೮ ವರ್ಷದ ಮಕ್ಕಳು ೯ ರಿಂದ ೧೨ ವರ್ಷದ ಮಕ್ಕಳು ೧೩ ರಿಂದ ೧೬ ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಹಾಗೂ ವೇಷಭೂಷಣ ಸ್ಪರ್ಧೆಗೆ ೨ ಗುಂಪುಗಳಲ್ಲಿ ೫ ರಿಂದ ೭ ವರ್ಷದ ಮಕ್ಕಳು ಹಾಗೂ ೮ ರಿಂದ ೧೦ ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ, ಹಾಗೂ ಸಮಾಧಾನಕರ ಬಂದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಂಸಾ ಪತ್ರ ನೀಡಲಾಗುವುದು. ಮಾರ್ಚ ೪ ರಂದು ಶನಿವಾರ ರಂದು ಮಧ್ಯಾಹ್ನ ೧೨ ಗಂಟೆಗೆ ನಗರ ಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜ ಗದಗ (ಮುನ್ಸಿಪಲ್ ಕಾಲೇಜ)ಇಲ್ಲಿ ಸ್ಪರ್ಧೆಗಳನ್ನು ಎರ್ಪಡಿಸಲಾಗಿದೆ. ಆಸಕ್ತ ಮಕ್ಕಳು ನೇರವಾಗಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕಚೇರಿ, ಕೊಠಡಿ ಸಂಖ್ಯೆ:೦೦೬, ಜಿಲ್ಲಾ ಆಡಳಿತ ಭವನ, ಗದಗ-೫೮೨೧೦೧ ದೂರವಾಣಿ ಸಂಖ್ಯೆ: ರವಿ.ಎಫ್.ಉಮಚಗಿ ೯೯೧೬೧೫೨೩೪೭ / ೭೨೦೪೧೮೭೫೦೭ ಸಂಯೋಜಕರು ಜಿಲ್ಲಾ ಬಾಲಭವನ ಗದಗ ದೂರವಾಣಿ ಅಥವಾ ಖುದ್ದಾಗಿ ಭೇಟಿಯಾಗಿ ಹೆಸರನ್ನು ನೋಂದಾಯಿಸಬಹುದು. ಮೇಲ್ಕಾಣಿಸಿದ ಸ್ಪರ್ಧೆಗಳಿಗೆ (ಚಿತ್ರಕಲೆ) ಅವಶ್ಯಕ ಸಾಮಗ್ರಿಗಳನ್ನು ತಾವೇ ತಂದು ಸ್ಪರ್ಧೆಗೆ ಭಾಗವಹಿಸಬಹುದಾಗಿದೆ.


Leave a Reply