This is the title of the web page
This is the title of the web page

Please assign a menu to the primary menu location under menu

State

ಗಾಂಧೀ ಜಯಂತಿ ಅಂಗವಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ


ಗದಗ ಸೆಪ್ಟೆಂಬರ್ ೨೭ : ೨೦೨೨-೨೩ ನೇ ಸಾಲಿನ ಗಾಂಧಿ ಜಯಂತಿ ಅಂಗವಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಅವಕಾಶವಿರುತ್ತದೆ. ಚಿತ್ರಕಲೆ ಸ್ಪರ್ಧೆಗೆ ೩ ಗುಂಪುಗಳಲ್ಲಿ ೫ ರಿಂದ ೮ ವರ್ಷದ ಮಕ್ಕಳು, ೯ ರಿಂದ ೧೨ ವರ್ಷದ ಮಕ್ಕಳು, ೧೩ ರಿಂದ ೧೬ ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಬಾಗವಹಿಸಲು ಅವಕಾಶವಿರುತ್ತದೆ. ಪ್ರಬಂಧ ಸ್ಪರ್ಧೆಗೆ ೨ ಗುಂಪುಗಳಲ್ಲಿ ೧೦ ರಿಂದ ೧೨ ವರ್ಷದ ಮಕ್ಕಳು ಹಾಗೂ ೧೩ ರಿಂದ ೧೬ ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಹಾಗೂ ಸಮಾಧಾನಕರ ಬಂದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ , ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸಾ ಪತ್ರ ನೀಡಲಾಗುವುದು. ಅಕ್ಟೋಬರ್ ೨ ರಂದು ಬೆಳಿಗ್ಗೆ ೯.೩೦ ಗಂಟೆಗೆ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜ ಗದಗ ಇಲ್ಲಿ ಏರ್ಪಡಿಸಲಾಗಿದೆ. ಆಸಕ್ತ ಮಕ್ಕಳು ನೇರವಾಗಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ ೦೦೬ , ಜಿಲ್ಲಾ ಆಡಳಿತ ಭವನ, ಗದಗ -೫೮೨೧೦೧ ದೂರವಾಣಿ ಸಂಖ್ಯೆ ರವಿ ಉಮಚಗಿ ೯೯೧೬೧೫೨೩೪೭/ ೭೨೦೪೧೮೭೫೦೭ ಸಂಯೋಜಕರು, ಜಿಲ್ಲಾ ಬಾಲ ಭವನ, ಗದಗ ದೂರವಾಣಿ ಅಥವಾ ಖುದ್ದಾಗಿ ಭೇಟಿಯಾಗಿ ಹೆಸರನ್ನು ನೊಂದಾಯಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply