ಯಮಕನಮರಡಿ: ಸಮೀಪದ ಹಿಡಕಲ್ ಡ್ಯಾಮಿನ ಬಸ್ £ಲ್ದಾನ ಬಳಿ ಮೈದಾನದಲ್ಲಿ ಹಿಡಕಲ್ ಡ್ಯಾಮ್ ಗುರು ಬಳಗದ ವತಿಯಿಂದ ಆಯೋಜಿಸಲಾದ ಪ್ರಥಮ ವರ್ಷದ ಶಿಕ್ಷಕರ ಪ್ರೀಮಿಯರ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಜರುಗಿತು.
ಈ ಟೂರ್ನಮೆಂಟ್ ದಲ್ಲಿ ಹುಕ್ಕೇರಿ ತಾಲೂಕಿನ ಸರಕಾರಿ ಹಾಗೂ ಅನುದಾ£ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಆರು ತಂಡಗಳು ಭಾಗವಹಿಸಿದ್ದವು.ಇದರಲ್ಲಿ ಪಾಶ್ಚಾಪೂರ ತಂಡ ಪ್ರಥಮ ಸ್ಥಾನ,ಬೆಲ್ಲದ ಬಾಗೇವಾಡಿ ತಂಡ ದ್ವಿತೀಯ ಸ್ಥಾನ ಹಾಗೂ ಯಮಕನಮರಡಿ ತಂಡ ತೃತೀಯ ಸ್ಥಾನ ಪಡೆಯಿತು.ನಂತರ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರಾಯೋಜಕರಾದ ಮಹಾದೇವಿ ಮೆಮೋರಿಯಲ್ ಆಸ್ಪತ್ರೆ ಪಾಶ್ಚಾಪೂರದ ವೈದ್ಯರಾದ ಡಾ. ವಿನಾಯಕ ಹಜ್ಜೆ,ಮಾಜಿ ಜಿ. ಪಂ ಸದಸ್ಯರಾದ ಮಂಜುನಾಥ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರರಾದ ಕರುಣಾಕರ ಶೆಟ್ಟಿ, ಆನಂದ ಪಾಟೀಲ, ಎಸ್.ಆಯ್.ಗುಂಡಗಿ, ಎಂ.ಬಿ.ನಾಯಿಕ, ಎಸ್.ಎ. ಸರಿಕರ, ಎಚ್.ಎಲ್.ಪೂಜೇರಿ ಎನ್.ಎಸ್.ದೇವರಮ£, ಎಸ್.ಎಸ್.ಚಿಕ್ಕಮಠ, ವಿ. ಎಂ.ನಾಯಿಕ, ಗ್ರಾಮ ಪಂಚಾಯತ್ ಸದಸ್ಯರಾದ ಖನಗಾಂವಿ, ರಾಜು ಭಾಗೋಜಿ, ಎಸ್.ಎಸ್.ಗಿಜವಣಿ, £ರ್ಣಾಯಕ ಮನ್ಸೂರ್ ಬಡೆಬಾಯಿ, ವೈಸಿಸಿ ಹಿಡಕಲ್ ಡ್ಯಾಮ್ ತಂಡದ ಹಿರಿಯ ಆಟಗಾರರು, ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, £ವೃತ್ತ ಶಿಕ್ಷಕರು ಹಾಗೂ ಎಲ್ಲಾ ತಂಡದ ಆಟಗಾರರು ಮತ್ತು ಟೂರ್ನಮೆಂಟ್ ಆಯೋಜಕರು ಉಪಸ್ಥಿತರಿದ್ದರು.ಶಿಕ್ಷಕರಾದ ಬಸವರಾಜ ಮಾಢಳ್ಳಿ ಸ್ವಾಗತಿಸಿದರು. ರಾಜು ತಳವಾರ £ರೂಪಿಸಿದರು ಕೊನೆಯಲ್ಲಿ ಕುಮಾರ. ಡಿ ವಂದಿಸಿದರು
Gadi Kannadiga > Local News > ಪಾಶ್ಚಾಪೂರ ಶಿಕ್ಷಕರ ತಂಡದ ಪಾಲಾದ ಟೀಚರ್ಸ್ ಪ್ರೀಮಿಯರ್ ಲೀಗ್ ಕಪ್