ಬೆಳಗಾವಿ ೨೭- ಹಿರಿಯ ರಂಗಕರ್ಮಿ ಗಜಾನನ ಮಹಾಲೆಯವರು ಯಾವುದೇ ಎಂಥಹದೇ ಪಾತ್ರವಿರಲಿ ತಮ್ಮ ನೈಜ ಅಭಿನಯದಿಂದ ಜೀವ ತುಂಬುತ್ತಿದ್ದರು. ಯಾವುದೇ ಫಲಾಪೇಕ್ಷೆ ಬಯಸದ ಇವರು ರಂಗಭೂಮಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಈ ಅಪರೂಪ ವ್ಯಕ್ತಿತ್ವದ ರಂಗಕರ್ಮಿ ಮಹಾಲೆಯವರು ಸದಾ ಸ್ಮರಣೀಯರು ಎಂದು ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಇಂದಿಲ್ಲಿ ಹೇಳಿದರು.
ಬೆಳಗಾವಿ ರಂಗ ಸಂಪದದವರು, ವಿನುತಾ ಹಂಚಿನಮನಿ ರಚನೆಯ ಪಂಚಕನ್ಯಾ ಸ್ಮರೇ ನಿತ್ಯಂ ನಾಟಕವನ್ನು ವಿದ್ಯಾವರ್ಧಕ ಸಂಘದಲ್ಲಿ ದಿ. ಗಜಾನನ ಮಹಾಲೆ ದತ್ತಿನಿಧಿ ನಿಮಿತ್ತ ಆಯೋಜಿಸಿದ್ದರು ನಾಟಕಕ್ಕೆ ಚಾಲನೆ ನೀಡಿದ ಡಾ. ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಡಾ. ವಿನುತಾ ಹಂಚಿನಮನಿಯವರು ಮಾತನಾಡಿ ರಂಗಕರ್ಮಿ ಗಜಾನನ ಮಹಾಲೆಯವರು ಇವರು ಯಾವುದೇ ಅಹಂ ಇಲ್ಲದ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಇವರೊಬ್ಬ ಸಿದಾ ಸದಾ ನಿಗರ್ವಿ ಗುಣವುಳ್ಳವರಾಗಿದ್ದರು ಎಂದು ಅವರನ್ನು ಸ್ಮರಿಸಿಕೊಂಡರು.ಬೆಳಗಾವಿ ರಂಗಸಂಪದದವರಿಂದ ‘ಪಂಚಕನ್ಯಾ ಸ್ಮರೇ ನಿತ್ಯಂ’ ನಾಟಕ ಪ್ರದರ್ಶನಗೊಂಡಿತು.ಅನಿಲ ಭುಜಂಗ, ಪ್ರೊ. ಹರ್ಷ ಡಂಬಳ, ಡಾ. ಶಶಿಧರ ನರೇಂದ್ರ, ನಿಂಗಣ್ಣ ಕುಂಟಿ, ಇಂದುಧರ ಹಿರೇಮಠ, ಡಾ. ಶರಣಮ್ಮ ಗೋರೆಭಾಳ, ಆಶಾ ಸೈಯದ್ದ, ಶಾರದಾ ಕೌದಿ, ಯು. ಎಸ್. ಕುನ್ನಿಬಾವಿ, ಎಸ್. ಎಂ. ದಾಸಪ್ಪಗೌಡರ, ವಿಜಯೇಂದ್ರ ಅರ್ಚಕ, ಲಕ್ಷö್ಮಣ ಬಕ್ಕಾಯಿ, ಮಹಾಂತೇಶ ನರೇಗಲ್ಲ ಮಂತಾದವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ಬೆಲ್ಲದ ವಹಿಸಿದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರಣ್ಣ ಒಡ್ಡಿನ ನಿರೂಪಿಸಿದರು. ಎಂ. ಎಂ. ಚಿಕ್ಕಮಠ ವಂದಿಸಿದರು.
Gadi Kannadiga > Local News > ಪಂಚ ಕನ್ಯಾ ಸ್ಮರೇ ನಿತ್ಯಂ ನಾಟಕ ಪ್ರದರ್ಶನ ರಂಗಕರ್ಮಿ ಮಹಾಲೆಯವರು ಸದಾ ಸ್ಮರಣೀಯರು