ಬೆಳಗಾವಿ.ಜ.೩೧: ಒಂಬತ್ತನೇಯ ಮತ್ತು ಹತ್ತನೇಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವೃತ್ತಿಪರ ಶಿಕ್ಷಣದ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳ ಜೀವನ ಸಮಗ್ರ ಅಭಿವೃದ್ದಿಗೆ ಸಹಾಯಕರವಾಗಲಿದೆ ಎಂದು ವಿದ್ಯಾ ಭಾರತಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ಹೆಗಡೆ ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯ ಕೆ.ಕೆ. ವೇಣುಗೋಪಾಲ ಸಭಾಂಗಣದಲ್ಲಿ ಇತ್ತಿಚಿಗೆ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ ಒಂಬತ್ತನೇಯ ಮತ್ತು ಹತ್ತನೇಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕುರಿತು ಮಾರ್ಗದರ್ಶನ ೧೦ ನೇ ಆವೃತ್ತಿಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಯಾವ ಶಿಕ್ಷಣ ಪಡೆದರೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಯಾವ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿಗೆ ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ೧೦ ನೆ ತರಗತಿಯ ನಂತರ ಯಾವ ಶಿಕ್ಷಣ ಪಡೆಯಬೇಕು ಎಂಬುದನ್ನು ಸೂಕ್ಷö್ಮವಾಗಿ ನಿರ್ಧರಿಸಬೇಕು. ಈ ನಿಮ್ಮ ಒಂದು ನಿರ್ಣಯವೇ ಮುಂದಿನ ಶಿಕ್ಷಣಕ್ಕೆ ಒಂದು ಉತ್ತಮ ವೇದಿಕೆ ನಿರ್ಮಿಸಿದಂತಾಗುತ್ತದೆ ಎಂದು ಹೇಳಿದ ಅವರು, ಜಿತೋ ಸಂಸ್ಥೆಯು ಕಳೆದ ೧೦ ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಮೌರ್ಯ ಅವರು ಉಪನ್ಯಾಸ ನೀಡಿ ವಿಮಾನಯಾನ, ವಿಮಾನ ನಿಲ್ದಾಣದಲ್ಲಿ ಕೆಲಸಗಳ ಲಭ್ಯತೆ ಮತ್ತು ಅವುಗಳನ್ನು ಪಡೆಯಲು ಯಾವ ಶಿಕ್ಷಣ ಪಡೆಯಬೇಕು ಮತ್ತು ವೈಮಾನಿಕ ಕ್ಷೇತ್ರದಲ್ಲಿ ವಿಪುಲ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ ಐಟಿಬಿಪಿ ಕಮಾಂಡಂಟ ರವಿಕಾಂತ ಗೌತಮ ಅವರು, ರಕ್ಷಣಾ ಇಲಾಖೆಯಲ್ಲಿ ಪಭ್ಯವಿರುವ ಸೇವೆ ಮತ್ತು ಅವಕಾಶಗಳು, ವೇತನ ಶ್ರೇಣಿ, ಇದಕ್ಕೆ ಅಗತ್ಯವಾಗಿರುವ ಕೋರ್ಸಗಳು ಮತ್ತು ಶಿಕ್ಷಣ, ಮಹಿಳೆಯರಿಗಾಗಿ ಮೀಸಲಿಟ್ಟ ಸೇವೆಗಳು ಸೇರಿದಂತೆ ಇನ್ನಿತರ ಮಾಹಿತಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಹಿರಿಯ ನ್ಯಾಯವಾದಿ ಚೇತನಾ ಬಿರಾಜ ಅವರು ಕಾನೂನು ಸೇವೆಗಳು, ನ್ಯಾಯಾಂಗ ಇಲಾಖೆಯಲ್ಲಿರುವ ಸ್ಥಾನ ಮಾನ, ವೇತನ ಶ್ರೇಣಿ, ಪದನ್ನೋತಿ ಅಗತ್ಯವಾದ ಶೀಕ್ಷಣಗಳ ಕುರಿತು ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಇನ್ನೋರ್ವ ಉಪನ್ಯಾಸಕಿ ಡಾ.ಪೂರ್ಣಿಮಾ ಪಟ್ಟಣಶೆಟ್ಟಿ ಅವರು ಮಾತನಾಡಿ, ಶೈಕ್ಷಣಿಕ ಇಲಾಖೆಯಲ್ಲಿರುವ ವಿಪುಲ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಂಡರು
ಈ ಕಾರ್ಯಾಗಾರದಲ್ಲಿ ಬೆಳಗಾವಿ ಸುತ್ತಮುತ್ತಲಿನ ಸುಮಾರು ೫೦೦ ಕ್ಕು ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜಿತೋ ಚೇರಮನ್ ಮುಕೇಶ ಪೋರವಾಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ನಿತಿನ ಪೋರವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಯ ಆದಿಮನಿ, ಅಮಿತ ಶಹಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Gadi Kannadiga > Local News > ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಮಾರ್ಗದರ್ಶನ ಅಗತ್ಯ- ಪರಮೇಶ್ವರ ಹೆಗಡೆ