ಮೂಡಲಗಿ: ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಹಾಗೂ ಸಮುದಾಯದ ಸಹಕಾರ ಮತ್ತು ಸಹಾಯ ತುಂಬಾ ಅವಶ್ಯಕವಾಗಿದೆಯೆಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಬಾರಿತೋಟದ ಸರ್ಕಾರಿ ಶಾಲೆಯಲ್ಲಿ ನಡೆದ ಪಾಲಕರ ಸಭೆ ಹಾಗೂ ಕಲ್ಲೋಳಿಯ ಸತ್ಯ ಸಾಯಿ ಸಮೀತಿಯವರ ಶಾಲಾ ದತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಅನುದಾನದ ಜೊತೆಗೆ ಸಮುದಾಯದವರು ಹಾಗೂ ಶಿಕ್ಷಣ ಪ್ರೇಮಿಗಳು ಸಹಕಾರ ನೀಡಿದರೆ ಅಭಿವೃದ್ಧಿಯ ಜೊತೆಗೆ ಮಕ್ಕಳಿಗೆ ಮೂಲಬೂತ ಸೌಕರ್ಯಗಳು ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾದ್ಯವಾಗುತ್ತದೆ. ಗ್ರಾಮಸ್ಥರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಮಕ್ಕಳ ಭವಿಷ್ಯ ನಿರ್ಮಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕಲ್ಲೋಳಿ ಸತ್ಯ ಸಾಯಿ ಸಮೀತಿಯವರು ಶಾಲೆಯನ್ನು ದತ್ತು ಪಡೆದುಕೊಂಡು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಶೈಕ್ಷಣಿಕ ಸೌಕರ್ಯಗಳನ್ನು ನೀಡಲು ಮುಂದಾಗಿರುವದಕ್ಕೆ ಅವರಿಗೆ ಶಾಲೆ ಹಾಗೂ ಗ್ರಾಮಸ್ಥರ ವತಿಯಿಂದ ಅಭಿನಂದನೆ ತಿಳಿಸುತ್ತೇವೆ ಎಂದರು.
ಸಾಯಿ ಸಮೀತಿಯ ಅದ್ಯಾತ್ಮಿಕ ಸಂಯೋಜಕ ಸುರೇಶ ಕಬ್ಬೂರ ಮಾತನಾಡಿ, ನಮ್ಮ ಸಂಸ್ಥೆöಯಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೇ ಶಾಲೆಗಳನ್ನು ದತ್ತು ತೆಗೆದುಕೊಂಡು ಭೌತಿಕ ಸೌಲಭ್ಯಗಳನ್ನು ಒದಗಿಸಿವದರ ಜೊತೆಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ನೈತಿಕ ಮೌಲ್ಯಗಳ ಬಗ್ಗೆ ಪಾಠ ಮಾಡುವದರ ಜೊತೆಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ತಂದೆ ಮಕ್ಕಳ ಸಂಬಂಧ ಹೇಗಿರಬೇಕು ಎಂಬುದನ್ನು ತಿಳಿಸುವದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದರು.
ಸಾಯಿ ಸೇವಾ ಸಮೀತಿ ಸಂಚಾಲಕ ಲೋಹಿತ ಕಲಾಲ ಮಾತನಾಡಿ, ಸಾಯಿ ಸಮೀತಿಯು ವಿದ್ಯಾಜ್ಯೋತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಶಾಲೆಯನ್ನು ದತ್ತು ತೆಗೆದುಕೊಂಡು ನಮ್ಮಲ್ಲಿ ತರಬೇತಿ ಪಡೆದ ಶಿಕ್ಷಕರಿಂದ ವೇದ ಉಪನಿಷÀÀತ್ತು ಮುಂತಾದ ಅದ್ಯಾತ್ಮಿಕ ಚಿಂತನೆಗಳನ್ನು ತಿಳಿಸುವದರ ಜೊತೆಗೆ ಹಿಂದೂ ಸಂಸ್ಕೃತಿಯನ್ನು ಬೆಳಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ ಗಾಣಿಗೇರ, ಬಾಲವಿಕಾಸ ಶಿಕ್ಷಕರಾದ ಸಂಜೀವಿನಿ ಗಾÀಣಿಗೇರ ಹಾಗೂ ಶಿಕ್ಷಕರಾದ ಕೆ.ಬಿ. ಮಮದಾಪೂರ, ವಿ.ಎನ್. ಕಳ್ಳಿಮನಿ, ದೀಪಾ ದಂಡಿಗದಾಸರ, ಬಿ.ಯು.ಗದಾಡಿ ಅತಿಥಿ ಶಿಕ್ಷಕ ಎಸ್.ವಾಯ್. ಬಿಸನಾಳ ಪಾಲಕರಾದ ಲಕ್ಷ್ಮೀಕಾಂತ ಹಮ್ಮನವರ, ಯಲ್ಲಪ್ಪ ಹುಲಕುಂದ ಹಾಗೂ ವಿದ್ಯಾರ್ಥಿಗಳ ತಾಯಂದಿರು ಭಾಗವಹಿಸಿದ್ದರು.
Gadi Kannadiga > Local News > ಶಾಲಾ ಅಭಿವೃದ್ಧಿಗೆ ಪಾಲಕರು ಹಾಗೂ ಸಮುದಾಯದ ಸಹಕಾರ ಅಗತ್ಯ:ಗಿರೆಣ್ಣವÀರ
ಶಾಲಾ ಅಭಿವೃದ್ಧಿಗೆ ಪಾಲಕರು ಹಾಗೂ ಸಮುದಾಯದ ಸಹಕಾರ ಅಗತ್ಯ:ಗಿರೆಣ್ಣವÀರ
Suresh08/08/2023
posted on
