This is the title of the web page
This is the title of the web page

Please assign a menu to the primary menu location under menu

Local News

ಶಾಲಾ ಕೊಟಡಿಗಳಿಗಾಗಿ ರಸ್ತೆಗಿಳಿದು ಪ್ರತಿಭಟಿಸಿದ ಪಾಲಕರು


ಬೆಳಗಾವಿ: ಶಾಲಾ ಕೊಠಡಿಗಳ ಮಂಜೂರಾತಿಯಲ್ಲಿ ಕನ್ನಡ ಶಾಲೆಗಳಿಗೆ ಅನ್ಯಾಯವಾಗಿದೆ. ಉರ್ದು ಶಾಲೆಗೆ ಕೊಠಡಿಗಳು ಮಂಜೂರಾಗಿದ್ದು ಕನ್ನಡ ಶಾಲೆಯ ಮಕ್ಕಳು ಶಾಲೆಯ ಕಟ್ಟೆಯ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದು ಆಗ್ರಹಿಸಿ ಖಾನಾಪೂರ ತಾಲ್ಲೂಕಿನ ಲಿಂಗನಮಠ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡ ಶಾಲೆಗಳಿಗೆ ಕೋಠಡಿಗಳನ್ನು ಮಂಜುರಾತಿ ಮಾಡುವಂತೆ ಆಗ್ರಹಿಸಿ ಗುರುವಾರ ಲಿಂಗನಮಕ್ಕಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಅವರು ಪ್ರಾಥಮಿಕ ಶಾಲೆಯಲ್ಲಿ ಏಳನೆ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ ಆದರೆ ಇಲ್ಲಿ ಕೇವಲ ಐದು ಕೊಟಡಿಗಳಿದ್ದು, ಮೂರು ತರಗತಿಗಳ ಮಕ್ಕಳು ಕುಳಿತುಕೊಳ್ಳಲು ಕೋಣೆಗಳಿಲ್ಲದೆ ಕಟ್ಟೆಗಳ ಮೇಲೆ ಕುಳಿತು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಹಾಕತೆಯನ್ನು ಹೊರಹಾಕಿದರು.

ಗ್ರಾಮದಲ್ಲಿರುವ ಉರ್ದು ಶಾಲೆಗೆ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.ಆದ್ರೆ ಕನ್ನಡ ಶಾಲೆಗೆ ಏಕಿಲ್ಲ. ಕನ್ನಡ ಶಾಲೆಯ ಉಳಿವಿಗಾಗಿ ಜಿಲ್ಲಾಡಳಿತ ಕೂಡಲೇ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸದರು.


Gadi Kannadiga

Leave a Reply